ಗಂಗಾವತಿ :ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ವಿಧಾನ ಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಏಪ್ರಿಲ್ ನಿಂದ ಪೂರ್ವಾನ್ವಯವಾಗುವಂತೆ ವಿದ್ಯುತ್ ದರವನ್ನು ತಲಾ ಯುನಿಟ್ ಗೆ 7 ರೂ ಗೆ ಹೆಚ್ಚಳ ಮಾಡಿರುವುದು ಮತ್ತು ಸುಮಾರು 5,6, ಹಂತಗಳ ಸ್ಲಾಬ್ ದರ ಹೊಂದಿದ್ದ ವಿಧಾನವನ್ನು ಎರಡು ಹಂತಗಳಿಗೆ ಬದಬಾಯಿಸಿರುವುದು ವ್ಯಾಪಕ ಬೆಲೆ ಏರಿಕೆಗೆ ಕಾರಣವಾಗಲಿದೆ. ಇದು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದ್ದು ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಅಗತ್ಯ ಕ್ರಮವಹಿಸಿ ಅದನ್ನು ತಡೆಯುವಂತೆ ಭಾರತ ಕಮ್ಮುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ತಾಲೂಕು ಸಮಿತಿಯ ಮುಖ್ಯ ಮಂತ್ರಿ  ಸಿದ್ಧರಾಮಯ್ಯರವರನ್ನು ಬಲವಾಗಿ ಒತ್ತಾಯಿಸುತ್ತದೆ. ನೂರು ಯುನಿಟ್ ಗಿಂತ ಹೆಚ್ಚುವರಿ ಬಳಸುವ ಗೃಹ ಬಳಕೆದಾರರು ಏಪ್ರಿಲ್ ನಿಂದ ಜುಲೈ ತಿಂಗಳಯೊಳಗೆ ಬಡ್ಡಿ ಮತ್ತು  ಅಸಲು ಸೇರಿ ಹಲವು ಸಾವಿರ ರೂಗಳ ಬಿಲ್ ಗಳ ಹೊರೆಯನ್ನು ಭರಿಸಬೇಕಾಗುತ್ತದೆ.

ಮಾತ್ರವಲ್ಲಾ ಈ ಬೆಲೆ ಏರಿಕೆಯು ವಾಣಿಜ್ಯಕ್ಕಾಗಿ ಬಳಸುವವರ ಮೂಲಕ ಜನ ಸಾಮಾನ್ಯರು ಬಳಸುವ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ ಹಾಗೂ ಸಾವಿರಾರು ಸಣ್ಣ ಕೈಗಾರಿಕೆಗಳ ಮುಚ್ಚುವಿಕೆಗೆ, ಅಲ್ಲಿ ದುಡಿಯುವ ದಶ ಸಾವಿರಗಟ್ಟಲೇ ಕಾರ್ಮಿಕರ ಕುಟುಂಬಗಳ ಬೀದಿಪಾಲು ಮಾಡಲು ಕಾರಣವಾಗುತ್ತದೆ.
ನೂತನ ಸರಕಾರವೂ ಗೃಹ ಜ್ಯೋತಿ ಯೋಜನೆಯಡಿ ರಾಜ್ಯದ ಜನತೆ ಬಳಸುವ ಉಚಿತ ವಿದ್ಯುತ್ ಗೂ ಹೆಚ್ಚಿನ ಹೊರೆಯನ್ನು ಭರಿಸಬೇಕಾಗುತ್ತದೆ. ಕೆ ಈ ಆರ್ ಸಿ ಯು  ವಿದ್ಯುತ್ ಬೆಲೆ ಯನ್ನು ಪರಿಷ್ಕರಿಸಿ ಹೆಚ್ಚಿಸುವುದರಿಂದ ಪ್ರತಿವರ್ಷವು ಜನ ಸಾಮಾನ್ಯರು ಹಾಗೂ ಮಧ್ಯಮ ವರ್ಗ ಬೆಲೆ ಏರಿಕೆಯ ಹೊರೆಯನ್ನ ನಿರಂತರವಾಗಿ ಭರಿಸಬೇಕಾಗುತ್ತದೆ, ಪ್ರತಿವರ್ಷವು ಸಣ್ಣ ಕೈಗಾರಿಕೆಗಳು ಹೊರೆಯನ್ನು ಭರಿಸಲಾಗದೇ ಮುಚ್ಚುವಂತಹ ಸ್ಥಿತಿ ಮುಂದುವರೆಯುತ್ತದೆ.ಭ್ರಷ್ಟತೆಯು ಸೇರಿದ ದುಬಾರಿ ಬೆಲೆಯ ಖಾಸಗೀ ವಿದ್ಯುತ್‌ ಖರೀದಿಯನ್ನು ನಿಲ್ಲಿಸದ ಮತ್ತು ವಿದ್ಯುತ್ ಕಳ್ಳತನವನ್ನು ಹಾಗೂ ಸೋರುವಿಕೆಯನ್ನು ತಡೆಯಲಾಗದ ವಿದ್ಯುತ್ ಕಂಪನಿಗಳು ಮತ್ತು ಕೆಇಆರ್ ಸಿ ಜನರ ಮೇಲೆ ಪ್ರತಿವರ್ಷವೂ ವಿದ್ಯುತ್ ಬೆಲೆ ಏರಿಕೆಯ ಹೊರೆಯನ್ನು ಸೇರುತ್ತಿರುವುದು ಅಕ್ಷಮ್ಯವಾಗಿದೆ ರಾಜ್ಯ ಸರಕಾರ ದುಬಾರಿ ಬೆಲೆಯಿ ಖಾಸಗೀರಂಗದ ವಿದ್ಯುತ್ ಖರೀದಿಯನ್ನು ಈ ಕೂಡಲೇ ನಿಲ್ಲಿಸಬೇಕು. ಈ ಕೆಇಆರ್ ಸಿ ಸಂಸ್ಥೆಯನ್ನು ಹುಟ್ಟು ಹಾಕಿದ್ದೇ ವಿದ್ಯುತ್‌ ರಂಗದ ಖಾಸಗೀಕರಣಕ್ಕೆ ಮತ್ತು ಖಾಸ ರ೦ಗದ ವಿದ್ಯುತ್ ಬೆಲೆ ಏರಿಕೆಯನ್ನು ನಿಯಮಿತವಾಗಿ ಹೆಚ್ಚಿಸುವ ದುರುದ್ದೇಶದಿಂದ ಆದ್ದರಿಂದ ಅದನ್ನು ರದ್ದುಪಡಿಸಲು ಕ್ರಮವಹಿ ಸವರು ಅಗತ್ಯವಿದೆ.

ಕರ್ನಾಟಕ ಸರ್ಕಾರ ಜುಲೈ ಒಂದರಿಂದ ಎಲ್ಲಾ ಬಿಪಿಎಲ್ ಅಂತ್ಯೋದಯ ಕಾಡುದಾರರಿಗೆ ಈಗ ಹೇಳಲಾಗುತ್ತಿದ್ದ 5ಕೆ. ಜಿ.ಅಕ್ಕಿಯನ್ನು ಹೆಚ್ಚಿಸಿ ತಲಾ 10 ಕೇಜಿ ಅಕ್ಕಿ ಅಥವಾ ಅಹಾರಧಾನ್ಯ ನೀಡಲು ನಿರ್ಧರಿಸಿ ಪ್ರಕಟಿಸಿದ್ದು ಸ್ವಾಗತಾರ್ಹವಾಗಿದೆ. ಅದರೇ, ಒಕ್ಕೂಟ ಸರಕಾರವು ರಾಜ್ಯಕ್ಕೆ ಹೆಚ್ಚುವರಿ ಆಹಾರಧಾನ್ಯ ನೀಡುವಲ್ಲಿ ಸಂಕುಚಿತ ರಾಜಕೀಯ ಮಾಡುತ್ತಿರುವುದು ತೀವ್ರ ಖಂಡನೀಯವಾಗಿದೆ. ರಾಜ್ಯ ಸರಕಾರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚುವರಿ ಆಹಾರಧಾನ್ಯ ನೀಡಲು ಭಾರತ ಆಹಾರ ನಿಗಮದ ಅಧಿಕಾರಿಗಳು ಒಪ್ಪಿದ್ದರೂ ಕೂಡ, ಒಕ್ಕೂಟ ಸರಕಾರ ಬಡವರ ವಿರೋಧಿಯಾಗಿ ನಿಂತಿರುವುದು. ಅಕ್ಷಮ್ಯವಾಗಿದೆ. ಬಿಜೆಪಿ ಮತ್ತು ಒಕ್ಕೂಟ ಸರಕಾರ ತಮ್ಮ ಸಂಕುಚಿತ ಜನ ವಿರೋದಿ ರಾಜಕಾರಣವನ್ನು ಈ ಕೂಡಲೇ ಕೈ ಬಿಟ್ಟು ಒಪ್ಪಂದದಂತೆ ಭಾರತ ಆಹಾರ ನಿಗಮದ ಮೂಲಕ ಆಹಾರ ಧಾನ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಪಿಐಎಂ ಪಕ್ಷವ: ಒಕ್ಕೂಟ ಸರಕಾರ ಹಾಗೂ ಪ್ರಧಾನ ಮಂತ್ರಿಗಳನ್ನು ವಾಗಿ ಒತ್ತಾಯಿಸುತ್ತದೆ. ರಾಜ್ಯ ಸರಕಾರದ ಈ ಯೋಜನೆಯು ಬಡವರ ಹಸಿವು ನೀಗಿಸಲು ನೆರವಾಗುವ ಯೋಜನೆಯಾಗಿದ್ದು, ಇದು ಹಸಿವಿನ ಸೂಚ್ಯಂಕದಲ್ಲಿ ಅತ್ಯಂತ ತಳ ಮಟ್ಟದಲ್ಲಿರುವ ನಮ್ಮ ದೇಶವನ್ನು ಸ್ವಲ್ಪವಾದರೂ ಮೇಲೆತ್ತುವ ಯೋಜನೆಯೆಂಬುದನ್ನು ಒಕ್ಕೂಟ ಸರಕಾರ ಅರಿಯ ಬೇಕು. ಒಕ್ಕೂಟ ಸರಕಾರ ರಾಜ್ಯ ಹಿತದ ವಿರುದ್ಧ ನಗ್ನವಾಗಿ ನಿಂತಿರುವಾಗ ನಮ್ಮ ರಾಜ್ಯ ಬಹುತೇಕರು ಬಿಜೆಪಿ ಎಂಪಿಗಳಿರುವಾಗ ಅವರು ಬಾಯಿ ಹೊಲೆದುಕೊಂಡಿರುವುದು ಅವರ ವಿರೋಧಿ ನೀತಿಯನ್ನು ಬಯಲುಗೊಳಿಸುತ್ತದೆ ಎಂದು ಕಟುವಾಗಿ ಟೀಕಿಸಿದೆ. ಜನರಿಗೆ ಅಹಾರಧಾನ್ಯದ ಬದಲು ನಗದು ವರ್ಗಾವಣೆ ಮಾಡುವಂತೆ ಸೂಚಿಸುವ ಬಿಜೆಪಿ ಧೋರಣೆಯ ಬಡವ ರಪರವಾಗಿರದೇ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಯಾಗಿದೆ. ಒಕ್ಕೂಟ ಸರಕಾರದ ಈ ಜನ ವಿರೋಧಿ ನೀತಿಯನ್ನು ಕೇಂದ್ರ ಸರ್ಕಾರ ಕೂಡಲೇ ಕೈ ಬಿಡಬೇಕೆಂದು ಸಿಪಿಐಎಂ ಖಂಡಿಸುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿಗಳು ನಿರುಪಾದಿ ಬೆಣಕಲ್ ತಾಲೂಕು ಸಮಿತಿ ಸದಸ್ಯರು ಶ್ರೀನಿವಾಸ್ ಮಂಜುನಾಥ ಡಗ್ಗಿ ಶಿವಣ್ಣ ಬೆಣಕಲ್ ದುಗಪ್ಪ ಬಾಳಪ್ಪ ಮರಿ ನಾಗಪ್ಪ ಟಿ ನಬಿಸಾಬ್ ಎ.ರಮೇಶ್ ಇತರರು ಇದ್ದರು.

error: Content is protected !!