ಗಂಗಾವತಿ:ಗಂಗಾವತಿ ನಗರದ 20 ನೇ ವಾರ್ಡ್ ಶ್ರೀ ದುರ್ಗಾದೇವಿ ದೇವಸ್ಥಾನ ಚಲವಾದಿ ಓಣೆಯಲ್ಲಿ ಇಂದು ಶ್ರೀ ಮಂಜುನಾಥ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಡಿಯಲ್ಲಿ ಕ್ಷಯ ರೋಗ ಹಾಗೂ ತುಂಬಾಕು ನಿಯಂತ್ರಣ ಕಾರ್ಯಗಾರ ಕಾರ್ಯಕ್ರಮ ಉದ್ಘಾಟಿಸಿಲಾಯಿತ್ತು.
ಉದ್ಘಾಟಿಸಿ ಮಾತನಾಡಿದ ಬಾಲಕರ ಪದವಿಪೂರ್ವ ಕಾಲೇಜು ಉಪನ್ಯಾಸಕರಾದ ನಾರಾಯಣ್ ಕಂದಗಲ್ ಅವರು ತುಂಬಾಕು ಸೇವನೆಯಿಂದ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ ಆದಕಾರಣ ನಿಮ್ಮ ನಿಮ್ಮ ಮನೆಯಲ್ಲಿ ಯಾರಾದ್ರು ಸಿಗರೇಟ್ ಸೇದಿದ್ದರೆ ಮನೆಯಲ್ಲಿ ಮಕ್ಕಳಿಗೂಕೂಡ ಆರೋಗ್ಯಕ್ಕೆ ತೊಂದರೆ ಆಗುತ್ತದೆ.ಆದಕಾರಣ ನಿಮ್ಮ ಮನೆಯಲ್ಲಿ ಹಿರಿಯರಿಗೆ ಹೇಳಿ ಏಕೆಂದರೆ ಹಾಗೂ ಈ ಒಂದು ಚಟ್ಟದಿಂದ ನಿಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಆದಕಾರಣ ನಾವು ನೀವು ಸೇರಿಕೊಂಡು ತುಂಬಾಕು ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಸಾರ್ವಜನಿಕ ಸಲಹೆಯನ್ನು ನೀಡಿದರು.
ಹಾಗೂ ಪ್ರತಿಯೊಂದು ಮನೆಯ ಮುಂದು ಒಂದು ಸಸಿಯನ್ನು ನೆಡಬೇಕು ಆ ಒಂದು ಸಸಿ ನಾಳೆ ದೊಡ್ಡಮರವಾಗಿ ಬೆಳದರೆ ಒಳ್ಳೆಯ ಗಾಳಿ ಸಿಗುತ್ತದೆ ಆದರಕಾರಣ ಪ್ರತಿಯೊಂದು ಮನೆಯ ಮುಂದೆ ಒಂದು ಸಸಿಯನ್ನು ನೆಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಪಾಟೀಲ್, ಖಾಸೀಂಬಿ,ನೆಹನಾಜ್, ವಲಯದ ಮೇಲ್ವಿಚಾರಕರಾದ ಜಯಲಕ್ಷ್ಮಿ, ಶಾರದ,ಮಂಜುಳಾ ಸೇರಿದಂತೆ ಇತರರು ಇದ್ದರು