ಗಂಗಾವತಿ:-ನೂತನ ಸರಕಾರ ಅಸ್ಥಿತ್ವಕ್ಕೆ ಬಂದಾಗಿನಿಂದ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಹೇಳಿಕೆಗಳು ಬರುತ್ತಲೇ ಇವೆ. ಪ್ರಸಕ್ತ ಸಾಲಿನಲ್ಲಿ ಪರಿಷ್ಕರಣೆ ಮಾಡುವದು ಬೇಡ ಎಂದು ನಿವ್ರತ್ತ ಮುಖ್ಯೋಪಾಧ್ಯಾಯ ಹಾಗೂ ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವ್ರದ್ದಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಸರಕಾರವನ್ನು ಒತ್ತಾಯಿಸಿದ್ದಾರೆ. ಈಗಾಗಲೆ ಶಾಲೆಗಳು ಪ್ರಾರಂಭವಾಗಿದ್ದು ಪಠ್ಯಪುಸ್ತಕಗಳು ಮಕ್ಕಳನ್ನು ತಲುಪಿದ್ದು ಪಾಠ ಚಟುವಟಿಕೆಳು ಪ್ರಾರಂಭವಾಗಿದ್ದು ಗೊಂದಲ ಸ್ರಷ್ಠಿಸುವದು ಸರಿಯಲ್ಲ.
ಇದರಿಂದ ಶಿಕ್ಷಕರಿಗೆ ಹಾಗೂ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀಳುತ್ತದೆ. ಯಾವ ಅಂಶಗಳನ್ನು ಬೋದನೆ ಮಾಡುವದು ಬೇಡವೂ ಅದನ್ನು ಬೋದಿಸುವದು ಬೇಡ ಎಂದು ಸುತ್ತೋಲೆ ಹೊರಡಿಸಲಿ. ಶಿಕ್ಷಣ ತಜ್ನರ ಸಮಿತಿ ರಚಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ತರಲಿ ಅಲ್ಲಿಯವರೆಗೆ ಯಾವುದೇ ಗೊಂದಲ ಮಾಡುವದು ಬೇಡ ಎಂದು ಸರಕಾರವನ್ನು ಒತ್ತಾಯಿಸದ್ದಾರೆ.
ಶಾಲಾ,ಕಾಲೇಜು ಒದುತ್ತಿರುವ ಎಲ್ಲಾ ವರ್ಗದ ಬಾಲಕ/ಬಾಲಕಿಯರಿಗೂ ಉಚಿತ ಬಸ್ ಪಾಸ್ ನೀಡಬೇಕು. ಗ್ರಾಮ ಪಂಚಾಯತ್ ಗೆ ಒಂದರಂತೆ ನವೋದಯ ಶಾಲೆ ಪ್ರಾರಂಬಿಸಬೇಕು.ಅಂಗವಿಕಲಮತ್ತು ಅನಾಥ ಮಕ್ಕಳ,ಹಾಗೂ ಬಾಲಕಾರ್ಮಿಕರ ವಸತಿಯುತ ಶಾಲೆಗಳನ್ನು ಪ್ರಾರಂಬಿಸಬೇಕು.
ಎಂಟನೇ ತರಗತಿ ಮಕ್ಕಳಿಗೆ ಬೈಸಿಕಲ್ ನೀಡಬೇಕೆಂದು ಮ್ಯಾಗಳಮನಿ ಮನವಿ ಮಾಡಿದ್ದರೆ. ಈ ಕುರಿತು ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವದು ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.