ಗಂಗಾವತಿ.31:ಇಂದು ಗಂಗಾವತಿ ಉಪವಿಭಾಗ ಆಸ್ಪತ್ರೆ ಸಭಾಂಗಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಗಂಗಾವತಿ ತಾಲೂಕು ಆರೋಗ್ಯಾಧಿಕಾರಿಗಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಹೆಚ್.ಎಮ್.ಮಂಜುನಾಥ ಇವರು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಏಕೆಂದರೆ ಈ ಒಂದು ತಂಬಾಕು ಸೇವನೆಯಿಂದ ಕ್ಯಾನ್ಸರ್ ಹೃದಯ ಸಂಬಂಧಿಸಿದ ಕಾಯಿಲೆಗಳು,ಶ್ವಾಸಕೋಶದ ಬಾಯಿಲೆಗಳಿಗೆ ತುಂಬಾಕು ಸೇವನೆಯನ್ನು ಪ್ರಮುಖ ಕಾರಣವಾಗಿದೆ, ಪ್ರತಿ ವರ್ಷ ವಿಶ್ವದಾದ್ಯಂತ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಖಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ,ತಂಬಾಕು ಸೇವನೆ ಮಾಡುವವರು ತಂಬಾಕು ಸೇವನೆ ಮಾಡದವರಿಗಿಂತ ಹತ್ತು ವರ್ಷ ಹೆಚ್ಚು ವಯಸ್ಸಾದವರಂತೆ ಕಾಣುತ್ತಾರೆ,ಪ್ರತಿ 6, ,ಸೆಕೆಂಡಿಗಳಿಗೊಮ್ಮೆ ಒಬ್ಬ ವ್ಯಕ್ತಿ ತಂಬಾಕು ಸೇವನೆಯಿಂದ ಉಂಟಾಗುವ ಖಾಯಿಲೆಗಳಿಂದ ಸಾವನ್ನಪ್ಪತ್ತಿದ್ದಾರೆ ಆದಕಾರಣ ದಯವಿಟ್ಟು ನಿಮ್ಮ ನಿಮ್ಮ ಮನೆಯಲ್ಲಿ ಯಾರು ಸಿಗರೇಟ್ ಬೀಡಿ ಸೇದುತ್ತಾರೆ ಅವರಿಗೆ ನೀವು ಬಿಡುಸುವ ಕೆಲಸವನ್ನು ಮಾಡಬೇಕೆಂದು ಸಲಹೆಯನ್ನು ನೀಡಿದರು.
ನಂತರಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳಾದ ಶರಣಪ್ಪ ಚಕೋಟಿ ತಂಬಾಕು ಬಳಕೆಯು ಅಪಾಯಕಾರಿ ಆರೋಗ್ಯದ ಮೇಲಿನ ಋಣಾತ್ಮಕ ಪರಿಣಾಮಗಳು ಧೀರ್ಘಾವದಿ ಮತ್ತು ಅಲ್ಪಟವಧಿ ದುಷ್ಟರಿಣಾಮಗಳನ್ನು ಒಳಗೊಂಡಿದೆ, ತಂಬಾಕು ನಿಯಮಿತ ಬಳಕೆಯಲ್ಲದೆ ಸಾಂದರ್ಭಿಕ ಬಳಕೆಯಲ್ಲಿಯೂ ಎಚ್ಚರ ವಹಿಸಬೇಕು,ಅದರ ಜೊತೆಗೆ ನಿಮ್ಮ ಮನೆಯಲ್ಲಿ ಯಾರು ತಂಬಾಕು ಸೇವನೆಯನ್ನು ಮಾಡೋತ್ತೋರೊ ಅವರಿಗೆ ಒಳ್ಳೆಯ ಮಾತಿನಿಂದ ಹೇಳಿ ದ್ರುಷ್ಟ ಚಟಗಳಿಗೆ ಕಡಿವಾಣ ಆಗಬೇಕೆಂದು,ಎಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆ ಪ್ರತಿಜ್ಞಾ ಮಾಡಿದ್ದಾರೆ ಎಂದು ಸಾರ್ವಜನಿಕರಿಗೆ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಲೀಲಾವತಿ,ದಂತ ವೈದ್ಯಾಧಿಕಾರಿಗಳಾದ ಡಾ.ವಿಜಯಕುಮಾರ್, ಡಾ.ಶ್ರೀದೇವಿ, ಡಾ.ರಮೇಶ,ಡಾ.ಕೀರ್ತಿ, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಆಶಾ ಬೇಗಂ,ಆರೋಗ್ಯ ಸಿಬ್ಬಂದಿಗಳಾದ ಶಿವಾನಂದ,ಮಾನಪ್ಪ,ಮಂಜುಳಾ,ಹಾಗೂ ಆಶಾ ಕಾರ್ಯಕರ್ತ ಸಂಘದ ಗ್ರಾಮೀಣ ಘಟಕ ಅಧ್ಯಕ್ಷ ವಿಜಯಲಕ್ಷ್ಮಿ ಆಚಾರ್ಯ, ಜ್ಯೋತಿ, ಸುನಂದ,ಮೀನಾಕ್ಷಿ,ಸರಸ್ವತಿ,ಪಾರ್ವತಿ, ಶ್ರೀದೇವಿ, ನೇತ್ರಾವತಿ, ಜಯಶ್ರೀ, ಕೆ.ಲಲಿತಾ, ಸೇರಿದಂತೆ ಹಾಗೂ ನರ್ಸಿಂಗ್ ಕಾಲೇಜು ವಿಧ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು
