ಶಹಾಪುರ : ತಾಲ್ಲೂಕಿನ ವಿವಿಧ ಗ್ರಾಮದ ಪಡಿತರ ಕೇಂದ್ರಗಳಿಗೆ ವಿತರಿಸಲು ಲಾರಿಯಲ್ಲಿ ಮಂಗಳವಾರ ಅನ್ನಭಾಗ್ಯದ ಅಕ್ಕಿಯನ್ನು ತುಂಬಿಕೊಂಡು ನಗರದ ಎಪಿಎಂಸಿ ಬಳಿ ನಿಲ್ಲಿಸಿದ್ದಾಗ ಲಾರಿ ಸಮೇತ ಅಕ್ಕಿಯನ್ನು ಕಳವು ಮಾಡಲಾಗಿದೆ.
ಎಪಿಎಂಸಿಯಲ್ಲಿ ಅನ್ನಭಾಗ್ಯ ಅಕ್ಕಿ ಸರಬರಾಜು ಮಾಡುವ ನಾಲ್ಕು ಲಾರಿಗಳನ್ನು ನಿಲ್ಲಿಸಲಾಗಿತ್ತು.ಅದರಲ್ಲಿ ಒಂದು ಲಾರಿಯಲ್ಲಿ 20 ಟನ್(420 ಮೂಟೆ) ಅಕ್ಕಿ ಇತ್ತು. ಚಾಲಕ ಕೀಲಿಯನ್ನು ಬಿಟ್ಟು ಬೇರೆ ಕಡೆ ಹೋದಾಗ ಕಳ್ಳತನ ನಡೆದಿದೆ ಎಂದು ಶಹಾಪುರ ಠಾಣೆಯ ಪೊಲೀಸ್ ಅಧಿಕಾರಿ ಒಬ್ಬರು ಮಾಹಿತಿ ನೀಡಿದರು
.ಶಹಾಪುರ ಠಾಣೆಯಲ್ಲಿ ವಿಚಾರಣೆ ನಡೆದಿದ್ದು. ಲಾರಿ ಶೋಧಕ್ಕೆ ಕಾರ್ಯಾಚರಣೆ ನಡೆದಿದೆ. ಪ್ರಕರಣ ದಾಖಲಿಸುವ ಕಾರ್ಯ ಸಾಗಿದೆ ಎಂದು ಶಹಾಪುರ ಠಾಣೆಯ ಪಿ.ಐ ಚೆನ್ನಯ್ಯ ಹಿರೇಮಠ ತಿಳಿಸಿದರು.ಈ ಕುರಿತು ಹೇಳಿಕೆ ನೀಡಿರುವ ಅವರು, ನಗರದ ಠಾಣೆಯಲ್ಲಿ ಸ್ಥಾಪಿಸಿರುವ ಸಿಸಿಟಿವಿ ಒಂದು ತಿಂಗಳಿಂದ ಸ್ಥಗಿತಗೊಳಿಸಿದ್ದಾರೆ.
ನಗರದಲ್ಲಿ ವ್ಯಾಪಕವಾಗಿ ಮಟ್ಕಾ, ಇಸ್ಪಿಟ್ ಬೆಟ್ಟಿಂಗ್ ಹಾವಳಿ ಸಾಕಷ್ಟು ನಡೆಯುತ್ತಿದ್ದರು ಸಹ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ತಕ್ಷಣ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.