ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 9 ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಮುಂಬೈನಲ್ಲಿ ಸುದ್ಧಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೋವಿಡ್-‌19 ಬಿಕ್ಕಟ್ಟಿನ ಸಂದರ್ಭ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಿದೆ.

ದೇಶಾದ್ಯಂತ 220 ಕೋಟಿ ಕೋವಿಡ್-‌19 ಲಸಿಕೆಯನ್ನು ವಿತರಿಸಲಾಗಿದೆ.ಕೋವಿಡ್‌ ಬಿಕ್ಕಟ್ಟಿನ ಸಂದರ್ಭ 2.97 ಕೋಟಿ ಭಾರತೀಯರನ್ನು ನಾನಾ ದೇಶಗಳಿಂದ ತವರಿಗೆ ಸುರಕ್ಷಿತವಾಗಿ ಕರೆ ತರಲಾಯಿತು ಎಂದರು .

ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ಪ್ರಭಾವಶಾಲಿಯಾಗಿ ಹೊರಹೊಮ್ಮಿದೆ. ಬಡವರಿಗೆ ಆಹಾರ ಭದ್ರತೆ ನೀಡಲಾಗಿದೆ ಎಂದರು.

ಅದೇ ರೀತಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಬೇರೆ ಯಾವುದೇ ದೇಶ ಈ ಅವಧಿಯಲ್ಲಿ ಸಾಧಿಸದಷ್ಟು ಮುನ್ನಡೆ ಸಾಧಿಸಿದ್ದೇವೆ.ಹಾಗೆಯೇ 12 ಕೋಟಿ ಮನೆಗಳಿಗೆ ಕುಡಿಯು ನೀರು ಕಲ್ಪಿಸಲಾಗಿದೆ. 9.60 ಕೋಟಿ ಉಚಿತ ಎಲ್ಪಿಜಿ ಅನಿಲ ಸಂಪರ್ಕ ವಿತರಿಸಲಾಗಿದೆ. ಬಡವರಿಗೆ ಪ್ರತಿ ಸಿಲಿಂಡರ್‌ ಗ್ಯಾಸ್‌ಗೆ 200 ರೂ. ಸಬ್ಸಿಡಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರಕಾರದಿಂದ ಬಡವರಿಗೆ 3.50 ಕೋಟಿ ರೂ. ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ. 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ ಬಡವರಿಗೆ 5 ಲಕ್ಷ ಕೋಟಿ ರೂ. ಮೌಲ್ಯದ ವೈದ್ಯಕೀಯ ಸೌಲಭ್ಯವನ್ನು ವಿತರಿಸಲಾಗಿದೆ. ಜನ್‌ ಔಷಧ ಕೇಂದ್ರಗಳಲ್ಲಿ 1 ರೂ.ಗೆ ಸ್ಯಾನಿಟರಿ ಪ್ಯಾಡ್‌ ಗಳನ್ನು ವಿತರಿಸಲಾಗುತ್ತಿದೆ.

ಅಷ್ಟೇ ಅಲ್ಲದೆ ಭಾರತ ಬ್ರಿಟನ್‌ ಅನ್ನು ಹಿಂದಿಕ್ಕೆ 5ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದರು.

ಇನ್ನು ಅಂತಾರಾಷ್ಟ್ರೀಯ ರಸಗೊಬ್ಬರ ದರ ಏರಿಕೆಯಾಗಿದ್ದಲೂ, ಏರಿಕೆಯ ಇಡೀ ಮೊತ್ತವನ್ನು ಕೋವಿಡ್‌ ಸಂದರ್ಭ ಮತ್ತು ನಂತರ ಸರ್ಕಾರವೇ ಭರಿಸಿದೆ.
ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಮೆಟ್ರೊ ಸೇವೆ ವಿಸ್ತರಣೆಯಿಂದ ಸಾರ್ವಜನಿಕ ಸಾರಿಗೆ ವೆಚ್ಚ ಇಳಿಕೆಯಾಗುತ್ತಿದೆ. ಭಾರತದ 15 ನಗರಗಳಲ್ಲಿ ಈಗ ಮೆಟ್ರೊ ರೈಲು ವ್ಯವಸ್ಥೆ ಇದೆ ಈ ಮೂಲಕ ಜನರ ಓಡಾಟಕ್ಕೆ ಮತ್ತಷ್ಟು ಸುಲಭವಾಗಿದೆ.

ಅದೇ ರೀತಿ ದೇಶದಲ್ಲಿ 700 ಹೊಸ ವೈದ್ಯಕೀಯ ಕಾಲೇಜುಗಳು ನಿರ್ಮಾಣವಾಗಿದೆ.ಪಿಎಂ ಗತಿ ಶಕ್ತಿ ಯೋಜನೆಯಿಂದ ಮೂಲಸೌಕರ್ಯ ಯೋಜನೆಗಳು ತ್ವರಿತವಾಗಿ ಅನುಷ್ಠಾನವಾಗುತ್ತಿದೆ.ಡಿಬಿಟಿ ಮೂಲಕ ಸರ್ಕಾರಕ್ಕೆ ಯೋಜನೆಗಳ ದಕ್ಷತೆ ವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಇನ್ನು ಮುಖ್ಯವಾಗಿ ಈ 9 ವರ್ಷಗಳಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭರದಿಂದ ಸಾಗುತ್ತಿದ್ದು, 2024ರ ಆದಿಯಲ್ಲಿ ಉದ್ಘಾಟನೆಯಾಗುವ ನಿರೀಕ್ಷೆ ಇದೆ ಎಂದರು.

error: Content is protected !!