ಕೊಪ್ಪಳ ಮೇ 29 : ಮಾಜಿ ಸೈನಿಕರ ಕುಂದುಕೊರತೆಗಳ ಇತ್ಯರ್ಥ ಕುರಿತು ಚರ್ಚಿಸಲು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಮಿತಿ ಕೊಠಡಿ ಸಭಾಂಗಣದಲ್ಲಿ ಮೇ 29ರಂದು ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಸಿಇಓ ಅವರು, ದೇಶವನ್ನು ಸಂರಕ್ಷಿಸುವ ಕಾರ್ಯದಲ್ಲಿ ಸೈನಿಕರು ನಿರಂತರವಾಗಿ ಕಾರ್ಯನಿರ್ವಹಿಸುತ್ತಾರೆ. ಇಂತಹ ಬಹುದೊಡ್ಡ ಪವಿತ್ರ ವೃತ್ತಿ ನಿರ್ವಹಿಸಿದ ಕೊಪ್ಪಳ ಜಿಲ್ಲೆಯಲ್ಲಿ ನೆಲೆಸಿರುವ ಮಾಜಿ ಸೈನಿಕರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು 3ನೇ ಸೋಮವಾರಂದು ಸಭೆ ನಡೆಸಿ ಮಾಜಿ ಸೈನಿಕರ ಕುಂದು ಕೊರತೆಗಳನ್ನು ಬಗೆಹರಿಸಲು ಕ್ರಮ ಕೈಗೊಳ‍್ಳಲಾಗುವುದು ಎಂದರು.
ಈ ವೇಳೆ ಮಾತನಾಡಿದ ಸಿಇಓ ಅವರು, ದೇಶವನ್ನು ಸಂರಕ್ಷಿಸುವ ಕಾರ್ಯದಲ್ಲಿ ಸೈನಿಕರು ನಿರಂತರವಾಗಿ ಕಾರ್ಯನಿರ್ವಹಿಸುತ್ತಾರೆ. ಇಂತಹ ಬಹುದೊಡ್ಡ ಪವಿತ್ರ ವೃತ್ತಿ ನಿರ್ವಹಿಸಿದ ಕೊಪ್ಪಳ ಜಿಲ್ಲೆಯಲ್ಲಿ ನೆಲೆಸಿರುವ ಮಾಜಿ ಸೈನಿಕರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು 3ನೇ ಸೋಮವಾರಂದು ಸಭೆ ನಡೆಸಿ ಮಾಜಿ ಸೈನಿಕರ ಕುಂದು ಕೊರತೆಗಳನ್ನು ಬಗೆಹರಿಸಲು ಕ್ರಮ ಕೈಗೊಳ‍್ಳಲಾಗುವುದು ಎಂದರು.
ಗ್ರಾಮ ಪಂಚಾಯತಿ ಹಾಗೂ ಪಟ್ಟಣ ಪಂಚಾಯತಿಯ ವಸತಿ ಯೋಜನೆಯಲ್ಲಿ ಸೌಲಭ್ಯ, ಕೃಷಿ ಹಾಗೂ ಹೈನುಗಾರಿಕೆ ಚಟುವಟಕೆಯಲ್ಲಿ ತೊಡಗಿರುವ ಮಾಜಿ ಸೈನಿಕರು ತಮ್ಮ ಹೊಲಗಳಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಹಾಗೂ ದನದ ಶೆಡ್ ನಿರ್ಮಾಣ, ಇತ್ಯಾದಿ ತೋಟಗಾರಿಕೆ ಮತ್ತು ನರೇಗಾ ಕಾಮಗಾರಿಗಳ ಸೌಲಭ್ಯ ಪಡೆಯಬಹುದು ಎಂದರು.
ಮಾಜಿ ಸೈನಿಕರಿಗೆ ಗ್ರಾಮ ಪಂಚಾಯತಿ ಹಾಗೂ ಪಟ್ಟಣ ಪಂಚಾಯತಿಯ ವಸತಿ ಯೋಜನೆಯಲ್ಲಿ ಶೇಕಡ 10 ರಷ್ಟು ಮನೆಗಳನ್ನು ನೀಡಬೇಕೆಂದು ಆದೇಶವಿದ್ದು, ಈ ವಿಷಯಕ್ಕೆ ಸಂಬಂಧಪಟ್ಟ ಪಿಡಿಓ ಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಮಾಜಿ ಸೈನಿಕರಿಗೆ ಸರ್ಕಾರಿ ಜಮೀನು ಹಂಚಿಕೆಯಲ್ಲಿ ಶೇಕಡ 10 ರಷ್ಟು ಜಮೀನು ಕೊಡಬೇಕೆಂದು ಸರ್ಕಾರದ ಆದೇಶ ಇದೆ. ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದ ಮಾಜಿ ಸೈನಿಕರಿಗೆ ಜಮೀನು ಒದಗಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಕೆಲವರಿಗೆ ಜಮೀನು ಮಂಜೂರಾಗಿದ್ದು, ಅದರ ಮೇಲೆ ಒತ್ತುವರಿಯಾದ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿ ತಿಂಗಳು 3ನೇ ಸೋಮವಾರದಂದು ಸಭೆ ನಡೆಸಲಾಗುವುದು. ಈ ಸಭೆಗೆ ಬರುವ ಮೊದಲು ನಿಮ್ಮದೊಂದು ಸಭೆ ನಡೆಸಿ, ನೀವು ಇಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಅಜೆಂಡಾ ತಯಾರಿಸಿ, ಎರಡು ದಿನ ಮುಂಚಿತವಾಗಿ ಜಿಪಂ ಕಚೇರಿಗೆ ತಿಳಿಸಿದರೆ ಚರ್ಚೆಗೆ ಅವಶ್ಯವಿರುವ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗುವುದು ಹಾಗೂ ಇನ್ನು ಮುಂದೆ ಯಾವುದೇ ಕುಂದು-ಕೊರತೆ ಹಾಗೂ ಸಮಸ್ಯೆಗಳಿದ್ದರೂ ಅಧ್ಯಕ್ಷರ ಮೂಲಕವೇ ಸಭೆಯಲ್ಲಿ ಮಂಡನೆ ಮಾಡಬೇಕು ಎಂದು ಸಿಇಓ ಅವರು ಮಾಜಿ ಸೈನಿಕರಿಗೆ ಸಲಹೆ ಮಾಡಿದರು.
ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೊಪ್ಪಳ ಜಿಲ್ಲೆಯ ಮಾಜಿ ಸೈನಿಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಮಾಜಿ ಸೈನಿಕರ ಅವಲಂಬಿತರು, ಮತ್ತಿತರರು ಉಪಸ್ಥಿತರಿದ್ದರು.
