ಗಂಗಾವತಿ: ಗಂಗಾವತಿ ನಗರದ್ದಲ್ಲಿ ರಾತ್ರಿ ವೇಳೆ ನಡು ರಸ್ತೆಯಲ್ಲಿ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದನ್ನು ಪ್ರಶ್ನೆ ಮಾಡಿದ ಗಸ್ತು ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಘಟನೆ ರವಿವಾರ ತಡರಾತ್ರಿ ನಡೆದಿದೆ.

ಗಂಗಾವತಿ ನಗರದ ಕಿಲ್ಲಾ ಏರಿಯಾದವರು ಎನ್ನಲಾದ ಸುಮಾರು ನಾಲ್ಕು ರಿಂದ ಐದು ಯುವಕರು ಸೇರಿ ಗಂಗಾವತಿ ಸಂಚಾರಿ ಪೊಲೀಸ್ ಠಾಣೆಯ ಶರಣಪ್ಪ, ಪಿ.ಸಿ ಹಾಗೂ ಶಿವಕುಮಾರ ಪಿ.ಸಿ ಇರ್ವರೂ ರಾತ್ರಿ 12ರ ಸುಮಾರಿಗೆ ಕಿಲ್ಲಾ ಏರಿಯಾದ ವೀರಭದ್ರೇಶ್ವರ ಗುಡಿಯ ಹತ್ತಿರ 4-5 ಜನ ಯುವಕರು ಅನಗತ್ಯವಾಗಿ ಮೋಟಾರ್ ಸೈಕಲ್ ಗಳಲ್ಲಿ ತಿರುಗಾಡುತ್ತಿರುವುದನ್ನು ಕಂಡು ವಿಚಾರಿಸಿದ್ದಕ್ಕೆ ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಆರೋಪಿತರು ಶರಣಪ್ಪ, ಪಿ.ಸಿ ಇವರಿಗೆ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದಿದ್ದು ಮಾರಣಾಂತಿಕ ಹಲ್ಲೆ ಮಾಡಿದ್ದು ಬಿಡಿಸಲು ಬಂದ ಇನ್ನೊಬ್ಬ ಪೊಲೀಸ್‌ ಪೇದೆಗೂ ಸಹ ಹೊಡೆದಿದ್ದು ಸದ್ಯಕ್ಕೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಘಟನೆ ವಿವರ ಪಡೆದ ನಗರ ಠಾಣೆ ಪಿ.ಐ ಗೊದಿಗೊಪ್ಪರವರು ತನಿಖೆ ಕೈಗೊಂಡಿದ್ದಾರೆ.

error: Content is protected !!