
ಗಂಗಾವತಿ:ನಗರದ ಬೇಡ ಬುಡ್ಗ ಜಂಗಮ ಸಮುದಾಯದ ಅಶ್ವ ಜಂಬಣ್ಣ ಮಕ್ಕಳಾದ ಅಶ್ವ ರಾಮಣ್ಣ ಅಶ್ವ ಸಣ್ಣ ಜಂಬಣ್ಣ ಕುಟುಂಬದವರ ದೇವರು ಮಾಡುವ ಕಾರ್ಯಕ್ರಮದ ಅಂಗವಾಗಿ .ನಮ್ಮ ಸಮುದಾಯದ ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು ನಂತರ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯ ಉಪಾಧ್ಯಕ್ಷರು ಹಾಗೂ ಅಲೆಮಾರಿ ಬೇಡ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘ ರಾಜ್ಯಾಧ್ಯಕ್ಷರು ಮಾರೆಪ್ಪ ಮಾತನಾಡಿ.ಹಿಂದೆ ಆಡಳಿತ ಮಾಡಿದ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ನಮ್ಮ ಅಲೆಮಾರಿ ಸಮುದಾಯದವರಿಗೆ ಸುಳ್ಳು ಭರವಸೆ ನೀಡಿದೆ , ಹಾಗೂ ಸದಾಶಿವ ಆಯೋಗದ ಒಳ ಮೀಸಲಾತಿ ಅಡಿಯಲ್ಲಿ 89 ಅಲೆಮಾರಿ ಸಮುದಾಯಕ್ಕೆ ಕೇವಲ 1 % ಹಣವನ್ನು ಕೊಟ್ಟು ಇನ್ನು ಕಡೆ ಗಣಿಸಿದೆ . ಹಾಗೆ ಕಳೆದ ಬಜೆಟ್ ನಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ 300 ಕೋಟಿ ಹಣವನ್ನು ಮರು ವಾಪಸ್ ಪಡೆದು ನಮ್ಮ ಸಮುದಾಯದಕ್ಕೆ ಬಾರಿ ಅನ್ಯಾಯ ಮಾಡಿದೆ.

ಮನೆತನದ 2013ರ ಚುನಾವಣೆಯಲ್ಲಿ
ಇದನ್ನೆಲ್ಲ ಗಮನಿಸಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ ಬಡವರ ಪಕ್ಷ ಹಾಗೂ ಬಡವರ ಪರ ಇರುವ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ನಮ್ಮ ಅಲೆಮಾರಿ ಸಮುದಾಯಕ್ಕೆ ನ್ಯಾಯ ಸಿಗುವ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಒಗ್ಗಟ್ಟನಿಂದ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಕೊಟ್ಟು ಬಲಪಡಿಸಿದ್ದೇವೆ . ಹೆಚ್ಚಿನ ಬಹುಮತದಿಂದ ಕಾಂಗ್ರೆಸ್ ಪಕ್ಷವು ಅಧಿಕಾರಿಕೆ ಬಂದಿದ್ದು ಹರ್ಷವನ್ನು ವ್ಯಕ್ತಪಡಿಸಿದರು .
ನಮ್ಮ ಅಲೆಮಾರಿ ಸಮುದಾಯ ಯುವಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಶ್ರಮಿಸಿ ಕಾರ್ಯಕರ್ತರಾಗಿ ಉನ್ನತವಾಗಿ ಕೆಲಸ ನಿಭಾಯಿಸಿಕೊಂಡು ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕಾರಣಭೂತರಾದ ಕಾಂಗ್ರೆಸ್ ಕಾರ್ಯಕರ್ತರನ್ನು ಸನ್ಮಾನಿಸಲಾಗುತ್ತದೆ ಎಂದು ಹೇಳಿದರು.

ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಜಂಬಣ್ಣ ಸಿರುಗುಂಪ, ಮೋತಿ ಗಂಗಾಧರ , ಕೊಂಡಪಲ್ಲಿ ವೀರೇಶ್ , ಅಶ್ವ ತಿಪ್ಪಸ್ವಾಮಿ, ಆರ್ ರಾಮಣ್ಣ, ಸಿಂಹಾದ್ರಿ ಮಾರಪ್ಪ , ಎಸ್ ಪವನ್, ಬಿ ಯಲ್ಲಪ್ಪ .ಹಾಗೂ ಇನ್ನು ಇತರರು ಇದ್ದರು. ಈ ಒಂದು ಕ್ಷಣದಲ್ಲಿ ಬುಡ್ಗ ಜಂಗಮ ಸಮುದಾಯದ ಕುಲ ನ್ಯಾಯಾಧೀಶರು ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.