
ಬಿಜೆಪಿ ಸುಳ್ಳು ಮಾತಿಗೆ ಕಿವಿ ಕೊಡದೆ. ತಂಗಡಗಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ
ಕಾರಟಗಿ:2023 ರ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರಕ್ಕೆ. ತಕ್ಕ ಪಾಠ ನೀಡಿ. ಕ್ಷೇತ್ರದ. ಅಭಿವೃದ್ಧಿಗಾಗಿ. ಶಿವರಾಜ ತಂಗಡಗಿ ಅವರನ್ನು. ಗೆಲ್ಲಿಸಿದು ಬಹಳ ಸಂತೋಷ ನಮ್ಮ ಕ್ಷೇತ್ರದಲ್ಲಿ ಇನ್ನು ಮುಂದೆ ಅಭಿವೃದ್ಧಿ ಕೆಲಸಗಳು ಆಗುತ್ತವೆ . ಕ್ಷೇತ್ರದ ಜನತೆ ಹಾಗೂ ರಾಜ್ಯದ ಜನತೆ ನಮ್ಮ ನಿರೀಕ್ಷೆಗೂ ಮೀರಿ ರಾಜ್ಯದ ಜನರು ಆಶಿರ್ವಾದ ಮಾಡಿದ್ದಾರೆ ಎಂದು ಅಲ್ಪಸಂಖ್ಯಾತ ಕಾಂಗ್ರೆಸ್ ಪಕ್ಷದ ಯುವ ಮುಖಂಡ ರೀಯಾಜ್ ಪಾಷ ಅವರು
ಸುದ್ದಿಗೋಷ್ಠಿ ಮಾಡಿ ಮಾತನಾಡಿ ಅವರು ,2018 ಚುನಾವಣೆಯಲ್ಲಿ ಬಿಜೆಪಿ ಸುಳ್ಳು, ಅಪಪ್ರಚಾರದಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಲಾಯಿತು. ಆದರೆ ಈ ಬಾರಿ ಕ್ಷೇತ್ರದ ಜನರು ಅವರ ಸುಳ್ಳು ಮಾತಿಗೆ ಕಿವಿ ಕೊಡದೆ. ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಆಯ್ಕೆ ಮಾಡಿದರೆ ಜನರ ಕಷ್ಟಕ್ಕೆ, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಶ್ರಮಿಸುವ ಕೆಲಸ ಶಿವರಾಜ ತಂಗಡಗಿ ಮಾಡುತ್ತಾರೆ .
ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಇಂದಿಗೂ ಜನರು ಮೆಚ್ಚುಕೊಳ್ಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷದವರು ಈ ಕ್ಷೇತ್ರದಲ್ಲಿ ಕೋಟಿ ಕೋಟಿ ದುಡ್ಡು ಹಂಚಿದರೂ .ಕ್ಷೇತ್ರದ ಮತದಾರು ಸೂಕ್ಷ್ಮವಾಗಿ ವಿಚಾರ ಮಾಡಿ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಶಿವರಾಜ ತಂಗಡಗಿ ಅವರನ್ನು ಶಾಸಕರನ್ನಾಗಿ ಮಾಡಿದ್ದಾರೆ.
ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನರು ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಗೆ ಬಹುಮತ ನೀಡಿದ್ದಾರೆ .ಬಿಜೆಪಿಯ ಭ್ರಷ್ಟ ಅಡಳಿತಕ್ಕೆ ಜನರು ನೊಂದಿದ್ದರು. ಹಗರಣಗಳ ಮೇಲೆ ಹಗರಣ, 40% ಕಮಿಷನ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಇದೆಲ್ಲದರಿಂದ ಬೇಸತ್ತ ಜನರು ಇಂದು ಕಾಂಗ್ರೆಸ್ ಗೆ ಆಶಿರ್ವಾದ ಮಾಡಿದ್ದಾರೆ. ರಾಜ್ಯದ ಜನತೆಗೆ ನೀಡಿದ ಭರವಸೆಯನ್ನು ರಾಜ ನಾಯಕರು ಈಡೇರಿಸುತ್ತಾರೆ. ಎಂದು ರೀಯಾಜ್ ಪಾಷ ಅವರು ಹೇಳಿದ್ದಾರೆ