ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಾಣದಾಳ,N ಮಲ್ಕಪೂರ,ಬುಳ್ಳಾಪೂರು, ಗುಂಡ್ರವಲ್ಲಿ, ಗಂಗಾವರ, ಗ್ರಾಮಗಳಲ್ಲಿ  ಬಿರುಸಿನ ಪ್ರಚಾರ ಮತ್ತು ಮತಯಾಚನೆ ಕೈಗೊಂಡು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ ವಸಂತ ಕುಮಾರ್ ರವರು ಮಾತನಾಡಿ ಇದೆ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಸನಗೌಡ ದದ್ದಲ್ ರವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿ

ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಈ ಭಾಗದಲ್ಲಿ  ನೀರಾವರಿ ಯೋಜನೆ ಜಾರಿಗೆ ತರಲು ಸಾಕಷ್ಟು ಯೋಜನೆಗಳನ್ನು ತಂದಿದ್ದಾರೆ, ಅದರಂತೆ ಈ ಭಾಗದ ಚಿಕ್ಕ ಮಂಚಾಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲು ಅಧಿವೇಶನದಲ್ಲಿ ಸಾಕಷ್ಟು ಬಾರಿ ಮಾತನಾಡಿ ಸರ್ಕಾರದ ಗಮನಕ್ಕೆ ತಂದ ಪರಿಣಾಮವಾಗಿ ಚಿಕ್ಕ ಮಂಚಾಲಿ ಬ್ರಿಡ್ಜ್ ಕಂ ಬ್ಯಾರೇಜ್ ಡಿಪಿಆರ್ ಆಗಿದೆ, ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದರೆ ಆದಷ್ಟು ಬೇಗ ಕಾಮಗಾರಿ ಪ್ರಾರಂಭ ವಾಗುತ್ತದೆ.

ಇದರಿಂದ. ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ನೀರಾವರಿ, ಹಸಿರು ಕ್ರಾಂತಿಯಾಗಬೇಕಾದರೆ  ಮತ್ತೊಮ್ಮೆ ಬಸನಗೌಡ ದದ್ದಲ್ ರವರಿಗೆ ಆರ್ಶಿವಾದ ಮಾಡಬೇಕು ಎಂದು ಮನವಿ ಮಾಡಿದರು .
ಗಾಣದಾಳು ಗ್ರಾಮದಲ್ಲಿ ‌ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಮಾಡಿದ್ದಾರೆ ಸಿಸಿ ರಸ್ತೆ, ಕುಡಿಯುವ ನೀರು, ಮುಖ್ಯರಸ್ತೆ, ಗಿಲ್ಲೆಸೂಗೂರು ಇಂದ  ಗಾಣದಾಳ ರಸ್ತೆ ಹಲವಾರು ಕಾಮಗಾರಿಗಳನ್ನು ಮಾಡಿದ್ದಾರೆ, ಮತ್ತೊಮ್ಮೆ ಆರ್ಶಿವಾದ ಮಾಡಿ ನಿರಂತರವಾಗಿ ನಿಮ್ಮ ಮನೆಯ ಮಗನಾಗಿ, ನಿಮ್ಮ ಸೇವಕನಾಗಿ ದುಡಿಯುತ್ತಾನೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಕ್ಷದ ಮುಖಂಡರು, ಗ್ರಾಮದ ಮುಖಂಡರುಗಳು ಗ್ರಾಮಸ್ಥರು, ಕಾರ್ಯಕರ್ತರು ಉಪಸ್ಥಿತರಿದ್ದರು

error: Content is protected !!