ಬಳ್ಳಾರಿ :ದರೋಜಿ ದೇವಲಾಪುರದ ಕಣಿವೆ ಮಾರೆಮ್ಮ ದೇವಸ್ಥಾನದ ಸಾನಿಧ್ಯದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಹಳೇ ದರೋಜಿ ಗ್ರಾಮದ   ಅಲೆಮಾರಿ ಬುಡ್ಗ ಜಂಗಮ ಸಮುದಾಯದ ಹಗಲುವೇಷದ ಹಿರಿಯ ಕಲಾವಿದರಾದ,  (ದಿವಂಗತ ನಾಡೋಜ ಬುರ್ರಕಥಾ ಈರಮ್ಮನ ಸಹೋದರ ) ದಿವಂಗತ ಅಶ್ವ ಬಾಲಸ್ವಾಮಿ ಮತ್ತು ಅವರ ಧರ್ಮಪತ್ನಿ ಗಾಳೆಮ್ಮ , ಸುಪುತ್ರ ಭೀಮೇಶ್ ರವರ ಅಗಲಿಕೆಯಿಂದ ಅವರ ಸ್ಮರಣಾರ್ಥವಾಗಿ ದೇವಸ್ಥಾನದ  ಆವರಣದಲ್ಲಿ  ಸಾರ್ವಜನಿಕ  ಭೋಜನ ಮಂಟಪವನ್ನು ನಿರ್ಮಿಸಲಾಗಿದೆ.

ಈ ಕಟ್ಟಡವನ್ನು  ಬುಡ್ಗ ಜಂಗಮ ಸಮುದಾಯದ ರಾಜ್ಯ ಅಧ್ಯಕ್ಷರಾದ ಸಣ್ಣ ಮಾರೆಪ್ಪ ರವರು ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಗಲುವೇಷ ಹಿರಿಯ ಕಲಾವಿದರಾದ ಅಶ್ವ ರಾಮಣ್ಣ, ಅಶ್ವ ತಿಪ್ಪೇಸ್ವಾಮಿ ಉದ್ವಾಟನೆ ಮಾಡಿದರು.

ಈ ಸಂದರ್ಭದಲ್ಲಿ ಕಟ್ಟಡವನ್ನು ಕಟ್ಟಿಸಿದ ಅಶ್ವ ರಾಮಣ್ಣ ಅವರಿಗೆ ಮತ್ತು ಮಾರೆಮ್ಮ ದೇವಸ್ಥಾನದ ಪೂಜಾರಿಗಳಿಗೆ ರಾಜ್ಯಾಧ್ಯಕ್ಷರಾದ ಸಣ್ಣ ಮಾರೆಪ್ಪ ಅವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಮುದಾಯದ ಕುಲ ಪಂಚಾಯಿತಿ ನ್ಯಾಯಾಧೀಶ ಗಂಗಾವತಿ ಅಶ್ವ ರಾಮಣ್ಣ , ಜಿಲ್ಲಾ ಅಧ್ಯಕ್ಷ ಮೋತಿ ಗಂಗಾಧರ, ಯುವ ಮುಖಂಡ ಮಾದನಂ ಮಾರೆಪ್ಪ . ಅಶ್ವ ದೊಡ್ಡ ಲಾಲಪ್ಪ, ಸಣ್ಣ ಲಾಲಪ್ಪ, ಅಶ್ವ ನಾಗರಾಜ, ಅಶ್ವ ಸುರೇಶ್, ಮಾರೇಶ್ , ಆರ್.ಕೃಷ್ಣ,  ಎಂ ಮಹಾಲಿಂಗ , ಎಂ ರಾಘವೇಂದ್ರ.  ಹಾಗೂ  ಸಮುದಾಯದ ಮುಖಂಡರು ಭಾಗವಹಿಸಿದರು.
ಡಾ ಅಶ್ವ ರಾಮು, ಅಧ್ಯಕ್ಷರು, ನಾಡೋಜ ಬುರ್ರಕಥಾ ದರೋಜಿ ಈರಮ್ಮ ಫೌಂಡೇಶನ್, ಹಳೇ ದರೋಜಿ

error: Content is protected !!