ಗಂಗಾವತಿ :ಕೆಪಿಸಿಸಿ ಕಾರ್ಯಧ್ಯಕ್ಷರಾದ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ. ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲಾ ನಾಯಕ ಸಮುದಾಯದ ಬಾಂಧವರು 2023ರ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಇಕ್ಬಾಲ್ ಅನ್ಸಾರಿ ಅವರ ಗೆಲುವಿಗಾಗಿ ಶ್ರಮಿಸಬೇಕೆಂದು ನಗರಸಭೆಯ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ ಕೃಷ್ಣಪ್ಪ ನಾಯಕ್ ಹೇಳಿದರು.

ಅವರು ತಮ್ಮ ಬೆಂಬಲದೊಂದಿಗೆ ಪತ್ರಿಕೆ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕಾಂಗ್ರೆಸ್ ಪಕ್ಷ ದೀನ ದಲಿತರ ಬಡವರಗಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ಸಾರಿ ಗೆಲುವಿಗೆ ಕ್ಷೇತ್ರದ ವ್ಯಾಪ್ತಿಯ 78 ಹಳ್ಳಿಗಳಿಗೆ ತೆರಳಿ ಮತ ಯಾಚನೆ ಮಾಡೋ ಸಂಕಲ್ಪ ಹೊಂದಿರುವರಾಗಿ ತಿಳಿಸಿದವರು.

ನಾಯಕ ಸಮಾಜ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಆದರೆ ಕಾಂಗ್ರೆಸ್ ನಲ್ಲಿ ಗುರುತಿಸಿ ಕೊಂಡಂತಹ ನಾಯಕರು ಕಾರ್ಯಕರ್ತರು ಗೆಲುವಿಗಾಗಿ ಮನವಿ ಮಾಡಿಕೊಂಡಿದ್ದಾರೆ.

ಇನ್ನೊಬ್ಬ ಮುಖಂಡರು ಆದ ರಮೇಶ್ ಜೋಗಿನ ಮಾತನಾಡಿ ಒಳ ಮೀಸಲಾತಿ ಸಂಬಂಧಿಸಿದಂತೆ ಯಾವುದೇ ಆಶ್ವಾಸನೆ  ನಾಯಕ ಸಮಾಜಕ್ಕೆ ಇಲ್ಲ ಆದರೆ ವಾಲ್ಮೀಕಿ ಸ್ವಾಮೀಜಿ ಅವರ  ಅನಿರ್ದಿಷ್ಟ  ಪ್ರತಿಭಟನೆಯಿಂದಾಗಿ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾಂಗ್ರೆಸ್ ಪಕ್ಷದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ಬಲಪಡಿಸಲು ಹಾಗೂ ಅವರ ಅಧಿಕಾರದ ಅವಧಿಯಲ್ಲಿನ ಹಲವು ಅಭಿವೃದ್ಧಿ ಕಾರ್ಯಗಳನ್ನು ಪುನಃ ಅನುಷ್ಠಾನಗೊಳಿಸಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಅವಶ್ಯಕತೆ ಇದೆ.

ಧರ್ಮ ದಳ್ಳೂರು  ಮೂಲಕ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿ ಪಕ್ಷ ಸಮಾಜದಲ್ಲಿ ಅಶಾಂತಿ ಹರಾಜಕತೆ ಉಂಟುಮಾಡುತ್ತದೆ ಜೊತೆಗೆ ಶೇಖಡಾ 40% ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಪೊಲೀಸ್ ನೇಮಕಾತಿ ಹಗರಣ ಕಳಪೆ ಮಟ್ಟದ ಕಾಮಗಾರಿ ಪಡಿತರ ವಿತರಣೆಯಲ್ಲಿ ಇಳಿಕೆ ಬೆಲೆ ಏರಿಕೆ ಪರಿಣಾಮವಾಗಿ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರ ಮೂಲಕ ಸಮೃದ್ಧ ಪಾರದರ್ಶಕ ಆಡಳಿತಕ್ಕೆ ನಾಯಕ ಸಮಾಜದ ಕೈ ಬೆಂಬಲಿಗರು ಮುಂದಾಗಬೇಕಾದ ಅನಿರ್ವಾರ್ತೆ  ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೋಗದ ಲಿಂಗಪ್ಪ ನಾಯಕ  ಲಕ್ಷ್ಮಣ ವಡಕಿ ಜೋಗದ ಶಿವು ಜೋಗದ ಲಿಂಗೇಶ್ ನಾಯಕ ಕೊಲ್ಕರ್ ಲಕ್ಷ್ಮಣ    ಗಿರೀಶ್ ನಾಯಕ ನಾಗರಾಜ್ ಗುಡ್ಡೇಕಲ್ ರಮೇಶ್ ಗುಡ್ಡೇಕಲ್ ಶರಣಪ್ಪ ಮಲ್ಲಪ್ಪ ನಾಯಕ ಜೋಗದ ರವಿ ನಾಯಕ ಸೇರಿದಂತೆ  ಮುಖಂಡರು ಪಾಲ್ಗೊಂಡಿದ್ದರು.

error: Content is protected !!