
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಜಿಲ್ಲೆಗೆ ಪ್ರವೇಶಿಸದಂತೆ ನ್ಯಾಯಾಲಯದ ಆದೇಶ ಇರುವ ಕಾರಣ ಮತದಾರರೊಂದಿಗೆ ಸಂಪರ್ಕ ಸಾಧಿಸಲು ಡಿಜಿಟಲ್ ಮಾರ್ಗ ಹಿಡಿದಿದ್ದಾರೆ. ಬಳ್ಳಾರಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಜಿಲ್ಲೆಗೆ ಪ್ರವೇಶಿಸದಂತೆ ನ್ಯಾಯಾಲಯದ ಆದೇಶ ಇರುವ ಕಾರಣ ಮತದಾರರೊಂದಿಗೆ ಸಂಪರ್ಕ ಸಾಧಿಸಲು ಡಿಜಿಟಲ್ ಮಾರ್ಗ ಹಿಡಿದಿದ್ದಾರೆ.
ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ, ಬಳ್ಳಾರಿ ನಗರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಅನುಪಸ್ಥಿತಿ ಸರಿದೂಗಿಸಲು ಕೆಆರ್ಪಿಪಿ ಡಿಜಿಟಲ್ ಸಂಪರ್ಕ ಕಲ್ಪಿಸಲು ಚಿಂತನೆ ನಡೆಸಿದೆ. ಪಕ್ಷವು ಸಾಮಾಜಿಕ ಮಾಧ್ಯಮವನ್ನು ಸಕ್ರಿಯವಾಗಿ ಬಳಸುತ್ತಿದೆ. ರೆಡ್ಡಿ ಭಾಷಣಗಳ ಡಿಜಿಟಲ್ ಡಿಸ್ಪ್ಲೇ ಹೊಂದಿರುವ ವಾಹನಗಳು ಬಳ್ಳಾರಿಯಲ್ಲಿ ಸುತ್ತು ಹಾಕುತ್ತಿವೆ.
ಅಧಿಕಾರಕ್ಕೆ ಬಂದಿದ್ದೇ ಆದರೆ, ಕೆಆರ್ಪಿಪಿಯಿಂದ ಸಕಾರಾತ್ಮಕ ಬದಲಾವಣೆ: ಗಾಲಿ ಜನಾರ್ಧನ ರೆಡ್ಡಿ ನಗರದಲ್ಲಿ ಸುಮಾರು 30 ಡಿಸ್ಪ್ಲೇ ವಾಹನಗಳು ಸಂಚರಿಸುತ್ತಿದ್ದು, ಹಲವು ತಾಣಗಳಲ್ಲಿ ರೆಡ್ಡಿ ಭಾಷಣ ಕೇಳಲು ಜನಸಾಗರವೇ ನೆರೆದಿರುತ್ತದೆ. ರೆಡ್ಡಿ ಅವರು ತಮ್ಮ ಪಕ್ಷದ ಪ್ರಣಾಳಿಕೆ ಮತ್ತು ಬಳ್ಳಾರಿಯಲ್ಲಿ ಸಚಿವರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸುವ ವಿಡಿಯೋ ಕ್ಲಿಪ್ ಇದೆ. ಕೆಆರ್ಪಿಪಿ ಅಭ್ಯರ್ಥಿ ಅರುಣಾ ಲಕ್ಷ್ಮಿ ಮಾತನಾಡಿ, ಜನಾರ್ದನ ರೆಡ್ಡಿ ಅವರು ಸಚಿವರಾಗಿ ಹಲವಾರು ಕಾಮಗಾರಿಗಳನ್ನು ನಡೆಸಿದ್ದಾರೆ, ಈ ಅಭಿವೃದ್ಧಿ ಕೆಲಸಗಲೇ ಕೆಆರ್ಪಿಪಿಯ ಬಹುದೊಡ್ಡ ಶಕ್ತಿಯಾಗಿದೆ ಎಂದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಜನಾರ್ದನ ರೆಡ್ಡಿ ಬಳ್ಳಾರಿ ನಗರ ಪ್ರವೇಶಿಸುವಂತಿಲ್ಲ.
ಆದರೆ ಅವರ ಅಭಿವೃದ್ಧಿ ಕಾರ್ಯಗಳು ಇಲ್ಲಿ ಕಾಣಸಿಗುತ್ತವೆ, ಇಲ್ಲಿ ಕೈಗೆತ್ತಿಕೊಂಡ ಶೇ 90ರಷ್ಟು ಕಾಮಗಾರಿಗಳು ಅವರಿಂದಲೇ ಆರಂಭಗೊಂಡಿವೆ ಎಂದು ಅರುಣಾ ಲಕ್ಷ್ಮಿ ವಿವರಿಸಿದ್ದಾರೆ. 13 ವರ್ಷಗಳ ಬಳಿಕ ಜನಾರ್ಧನ ರೆಡ್ಡಿ ಹೆಲಿಕಾಪ್ಟರ್ ಪ್ರಯಾಣ! ಒಬ್ಬ ಮಹಿಳೆಯಾಗಿ, ನನ್ನ ಪತಿ ಇಲ್ಲದೆ ಸಾರ್ವಜನಿಕ ರ್ಯಾಲಿ ನಡೆಸುವುದು ಕಷ್ಟ, ಆದರೆ ನಾವು ಸುಪ್ರೀಂಕೋರ್ಟ್ ಆದೇಶವನ್ನು ಗೌರವಿಸಬೇಕು. ನಾವು ಸಾಮಾಜಿಕ ಮಾಧ್ಯಮದಲ್ಲಿ ನಮ್ಮ ಪಕ್ಷದ ದಿನಚರಿಯನ್ನು ನವೀಕರಿಸುತ್ತಲೇ ಇರುತ್ತೇವೆ. ಬಳ್ಳಾರಿಯಲ್ಲಿ ಎಲ್ಲೇ ಹೋದರೂ, ಜನರನ್ನು ಭೇಟಿ ಮಾಡಿದರೂ ನನ್ನ ಪತಿ ಮಾಡಿದ ಕೆಲಸದ ಬಗ್ಗೆ ಮಾತನಾಡುತ್ತಾರೆ. ರೆಡ್ಡಿಯವರ ಶ್ರಮದಿಂದ ನಾನು ಗೆಲ್ಲುತ್ತೇನೆ ಎಂದು ಭಾವಿಸುತ್ತೇನೆ. ವಸತಿ ಮತ್ತು ಹೊಸ ವಿಮಾನ ನಿಲ್ದಾಣದ ಭರವಸೆ ನೀಡಿದ ನಂತರ ಮತದಾರರು ರೆಡ್ಡಿ ಗೆಲುವಿಗೆ ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದರು.