ಬೆಂಗಳೂರು : ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಅಧಿಕಾರಿ ಮತ್ತು ಆತನ ಪತ್ನಿಗೆ ಶಿಕ್ಷೆ ವಿಧಿಸಲಾಗಿದೆ. ತೋಟಗಾರಿಕೆ ಇಲಾಖೆಯ ಉಪ ಅಧೀಕ್ಷಕ ಅಧಿಕಾರಿಗೆ ಸಿಬಿಐ ಭ್ರಷ್ಟಾಚಾರ ನಿಗ್ರಹದಳ ಸಲ್ಲಿಸಿದ ಕೇಸ್ ನಲ್ಲಿ ಬೆಂಗಳೂರು ಸಿಬಿಐ ನ್ಯಾಯಾಲಯ 3.5 ಕೋಟಿ ರೂ.

ದಂಡ, 5 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಧೀಶರು ಮೈಸೂರಿನಲ್ಲಿರುವ ಭಾರತೀಯ ಪುರಾತತ್ವ ಇಲಾಖೆಯಲ್ಲಿನ ಉಪ ಅಧೀಕ್ಷಕ ಹಾರ್ಟಿಕಲ್ಚರಿಸ್ಟ್ ಆಗಿದ್ದ ಎಂ.ಹೆಚ್. ತಂಗಳ್ ಅವರಿಗೆ ಶಿಕ್ಷೆ ವಿಧಿಸಿದೆ. ಇದೇ ಪ್ರಕರಣದಲ್ಲಿ ತಂಗಳ್ ಅವರ ಪತ್ನಿಗೂ ಶಿಕ್ಷೆ ವಿಧಿಸಲಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಪತಿ-ಪತ್ನಿಗೆ ಶಿಕ್ಷೆ ವಿಧಿಸಿದ ಅಪರೂಪದ ಪ್ರಕರಣ ಇದಾಗಿದೆ. ಅವರ ಪತ್ನಿಗೆ ಒಂದು ಲಕ್ಷ ರೂ. ದಂಡ, ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

error: Content is protected !!