ಯಲಬುರ್ಗಾ: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಏ.28 ರಂದು ಬೆಳಗ್ಗೆ 10 ಗಂಟೆಗೆ ಚುನಾವಣಾ ವೆಚ್ಚಗಳ ಲೆಕ್ಕ ಪತ್ರ ಪರಿಶೀಲನಾ ಸಭೆ ಜರುಗಲಿದೆ.

ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದ ದಿನಾಂಕದಿಂದ ಈ ಕೆಳಗೆ ನಿಗದಿಪಡಿಸಿದ ದಿನಾಂಕದವರೆಗೆ ತಮ್ಮ ಚುನಾವಣಾ ವೆಚ್ಚಗಳಿಗಾಗಿ ಖರ್ಚುಮಾಡಲಾದ ವಿವರಗಳನ್ನು ನಿಗಧಿತ ನಮೂನೆಯಲ್ಲಿ ವೆಚ್ಚ ವೀಕ್ಷಕರ ತಪಾಸಣೆಗಾಗಿ ಹಾಜರಾಗಿ ಚುನಾವಣೆ ವೆಚ್ಚಗಳಿಗಾಗಿ ಪೂರೈಸಲಾದ ಎ.ಬಿ.ಸಿ ರಜಿಸ್ಟರ್ ಗಳೊಂದಿಗೆ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಅದರ ವ್ಯವಹಾರಗಳ ಝರಾಕ್ಸ್ ಪ್ರತಿ ಮತ್ತು ವೆಚ್ಚದ ಅಧಿಕೃತ ಮೂಲ ವೋಚರಗಳೊಂದಿಗೆ ನಿಗಧಿಪಡಿಸಿದ ಈ ಕೆಳಗಿನಂತೆ ದಿನಾಂಕ 28/4/2023(ಮೊದಲ)ಹಾಗೂ 02/05/2023 (ದ್ವಿತೀಯ) ಮತ್ತು 06/05/2023(ತೃತೀಯ) ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ 63 ಯಲಬುರ್ಗಾ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಅಭ್ಯರ್ಥಿಗಳು ಅಥವಾ ಚುನಾವಣಾ ವೆಚ್ಚಗಳಿಗಾಗಿ ನೇಮಿಸಿರುವ ಅಭ್ಯರ್ಥಿಯ ಏಜೆಂಟ್ ರವರು ಖುದ್ದಾಗಿ ಹಾಜರಾಗುವಂತೆ  ಮಾನ್ಯ ಚುನಾವಣಾಧಿಕಾರಿಗಳಾದ ಕಾವ್ಯರಾಣಿ ಕೆ.ವಿ ಅವರು ಸೂಚಿಸಿದ್ದಾರೆ.

error: Content is protected !!