ಗಂಗಾವತಿ :ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲಿನಿಂದ ಬೆಳಕಿನಡೆಗೆ, ಸಾಗುವಳಿ ವಿಶ್ವಗುರು ಬಸವಣ್ಣನವರ ವಚನ ಸಾಹಿತ್ಯ ಸರ್ವಕಾಲಕ್ಕೂ ಸಂಬಂಧವಾಗಿದೆ ಎಂದು ಸಾರ್ವಜನಿಕ ಉಪ ವಿಭಾಗದ ಆಡಳಿತ ಅಧಿಕಾರಿ, ಡಾ. ಈಶ್ವರ ಸವಡಿ ಹೇಳಿದರು.

ಅವರು ಜಗದ್ಗುರು ಬಸವೇಶ್ವರ ಜಯಂತಿ ಉತ್ಸವ ಪ್ರಯುಕ್ತ  ಆನೆಗೊಂದಿ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ  ಬಸವ ಜಯಂತಿ ಪ್ರಯುಕ್ತ, ಬಸವಣ್ಣನವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿದ ಬಳಿಕ ಮಾತನಾಡಿ..

ಬಸವಣ್ಣ ಅವರ ಆಶಯದಂತೆ ಸದಾಕಾಲದ ಅನ್ನ ದಾಸೋಹಕ್ಕಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಗಂಗಾವತಿಯಲ್ಲಿ ನೂತನವಾಗಿ ಸುಮಾರು 400-500 ರೋಗಿಗಳಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ  ಏಕಕಾಲಕ್ಕೆ ಊಟ ಮಾಡುವಂತಹ ಬೃಹತ ಅಡುಗೆ ಕೊಠಡಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಈಶ್ವರ ಸವಡಿ ಅವರು ಉದ್ಘಾಟಿಸಿದ ಬಳಿಕ ಮಾತನಾಡಿದರು.

ಲಿಂಗಾಯತ ವೀರಶೈವ ಪರಂಪರೆಯಲ್ಲಿ ತ್ರಿವಿಧ ದಾಸೋಹಕ್ಕೆ ಹೆಚ್ಚಿನ ಆದ್ಯತೆಯನ್ನು ಕಲ್ಪಿಸಲಾಗುತ್ತದೆ, ಗುರು ಬಸವಣ್ಣನವರ ಅನುಭವ ಮಂಟಪ, ಸಂವಿಧಾನದ ಆಶಯದಂತೆ ಅವರ ತತ್ವ ಸಿದ್ಧಾಂತಗಳನ್ನು ಒಳಗೊಂಡಿದೆ, ಅಸ್ಪೃಶ್ಯತೆ ಮೂರರ ನಂಬಿಕೆ ಅಜ್ಞಾನ ಅಂಧಕಾರವನ್ನು ಹೊಡೆದುಡಿಸುವಲ್ಲಿ ವಿಶ್ವಗುರು ಬಸವಣ್ಣನವರ ಬಡಿಗೆ ಅಪಾರವಾಗಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿವರ್ಗದವರು ಸೇರಿದಂತೆ ಇತರರು ಇದ್ದರು.

error: Content is protected !!