ಗಂಗಾವತಿ: ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವುದು ಒಂದು ವಿಶೇಷ. 1950 ರಿಂದ ಇಲ್ಲಿಯವರೆಗೆ ಯಾವ ಮಹಿಳೆ ಮುಂದೆ ಬಂದಿಲ್ಲ ಆದರೆ ಇದು ಇದೆ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಮೊದಲನೇಯ ಬಾರಿಗೆ ಚುನಾವಣೆಯಲ್ಲಿ  ಸ್ಪರ್ಧಿಸಲು ಮುಂದಾಗಿದ್ದಾಳೆ.

ಪ್ರಥಮವಾಗಿ ಚುನಾವಣಾ ಕಣಕ್ಕೆ ಇಳಿದಿರುವೆ ನಮಗೆ ಒಂದು ಅವಕಾಶ ನೀಡಿ, ಎಂದು ಗೀತ ಮೋಹನ್ ರವರು ಹೇಳಿದರು. ನಾನು ಸುಮಾರು ವರ್ಷಗಳಿಂದ ಅಂಜನಾದ್ರಿ ಬೆಟ್ಟಕ್ಕೆ ಆಂಜನೇಯನ ಆಶೀರ್ವಾದ ಪಡೆದುಕೊಳ್ಳುವುದಕ್ಕೆ ಬೆಂಗಳೂರಿನಿಂದ ತಿಂಗಳಿಗೆ ಎರಡು ಟೈಮ್ ಬಂದು ಹೋಗುತ್ತಿದ್ದೆ ಆ ಸಮಯದಲ್ಲಿ ಹಣವಾಳ ಗ್ರಾಮ ಮತ್ತು ಗಂಗಾವತಿ ತಾಲೂಕು, ಸುತ್ತು ಮುತ್ತ ಮುಖಂಡರ ಪರಿಚಯವಾಯಿತು ಅವತ್ತಿನಿಂದ ಇವತ್ತಿನವರೆಗೂ ನಾನು ಅವರ ಜೊತೆ ಉತ್ತಮ ಬಾಂಧವ್ಯದಿಂದ ಹೊಡನಾಟ ದಲ್ಲಿದ್ದೇನೆ ಮತ್ತು ಬೇರೆ ಬೇರೆ ಸಮಾಜ ಕಾರ್ಯಕ್ರಮದ ಭಾಗವಹಿಸಿದ್ದೇನೆ.

ಇವಾಗ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ನಾನು ಸ್ಪರ್ಧೆ ಮಾಡಲು ನಾಮಪತ್ರ ಸಲ್ಲಿಸಿದ್ದೇನೆ ನನ್ನನ್ನು ಗೆಲ್ಲಿಸಿ ತರುತ್ತಾರೆ ಈ ಗಂಗಾವತಿ ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ ತುಂಬಾ ವಿಶ್ವಾಸಿವಿದೆ ಎಂದು ಹೇಳಿದರು.

ಈ ಕ್ಷೇತ್ರದಲ್ಲಿ ಪುರಷರ ಪ್ರಬಲ ರಾಜಕೀಯದಲ್ಲಿ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಒಂದು ದೊಡ್ಡ ಸವಾಲು ಎಂದು ತಿಳಿಸಿದರು.

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಳ್ಳಾರಿ ಜಿಲ್ಲೆಯ ಗಣಿಧಣಿ ಮಾಜಿ ಸಚಿವ ಜರ್ನಾದನ ರೆಡ್ಡಿ, ಮತ್ತು ಇಕ್ಬಾಲ್ ಅನ್ಸಾರಿ ಹಾಗೂ ಮೂರನೇ ಬಾರಿಗೆ ಕಸರತ್ತು ಪ್ರದರ್ಶಿಸುತ್ತಿರುವ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪರಣ್ಣ ಮುನವಳ್ಳಿ ಇವರು ನಡುವೆ ಸ್ಪರ್ಧೆ ಮಾಡುತ್ತಿರುವುದು ಒಂದ ಸಾಹಸ ಎಂದು ತಿಳಿಸಿದರು.

ಈಜಿದರೆ ಸಮುದ್ರದಲ್ಲಿ ಈಜುಬೇಕು.ಯುದ್ದ ಮಾಡಿದರೆ ಇಂತಹವರ ಜೊತೆಗೆ ಯುದ್ದ ಮಾಡಬೇಕು ಎಂದು ಹೇಳಿದರು.

ಇವತ್ತು ಗಂಗಾವತಿ ವಿಧಾನ ಸಭಾ ಕ್ಷೇತ್ರದ ಜನರೆ ನನಗೆ ಸಂಬಂಧಿಕರು,ಬಂಧುಗಳು ಹಿತೈಷಿಗಳು, ಇವರು ಅರ್ಶಿವಾದ ಮಾಡವವರು ಎಂಬ ನಂಬಿಕೆ ಇದೆ.ಹೆಳಿದರು    ಈ ಸಂದರ್ಭದಲ್ಲಿ ಗಂಗಾಧರ, ಮಹಿಳೆಯರು ಇತರರು ಇತರರು ಉಪಸ್ಥಿತರಿದ್ದರು

error: Content is protected !!