
ವಾರ್ಡ್ ನಂಬರ್ 20 ರಲ್ಲಿ ಒಳ ಚರಂಡಿ ಡ್ಯಾಮೇಜ್ ಆಗಿರುವುದನ್ನು ದುರಸ್ತಿ ಮಾಡುವಂತೆ ದಲಿತ ಯುವ ಮುಖಂಡ ಶಶಿಕುಮಾರ್ ಒತ್ತಾಯ
ಗಂಗಾವತಿ :ಗಂಗಾವತಿ ನಗರದ ವಾರ್ಡ್ ನಂಬರ್ 20 ರಲ್ಲಿ ಮಧ್ಯಭಾಗದಲ್ಲಿರುವ ಒಳಚರಂಡಿ ಡ್ಯಾಮೇಜ್ ಆಗಿರುತ್ತದೆ ಅದರಿಂದ ಕಬ್ಬು ನಾರುತ್ತಿರುವ ನೀರು ಹೊರಗಡೆ ಬರುತ್ತಿರುವುದರಿಂದ ಗಬ್ಬು ದುರ್ವಾಸನೆ ಬರುತ್ತಿರುವುದು ಒಳ ಚರಂಡಿಯ ಗುಂಡಿಯ ಸುತ್ತಮುತ್ತ ಅಂಗನವಾಡಿ ಕೇಂದ್ರ ಮತ್ತು ದೇವಸ್ಥಾನಗಳ ಅದೇ ಸ್ಥಳದಲ್ಲಿ ಇರುವುದರಿಂದ ಆವಾಸನೆ ತಾಳಲಾರದೆ ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿರುವ ಪರಿಸ್ಥಿತಿ ಬಂದಿದೆ.
ಸ್ಥಳೀಯರಾದ ಶಶಿಕುಮಾರ್ ಆರೋಪ ಮಾಡಿದ್ದಾರೆ ಈ ವಠಾರಗಳಲ್ಲಿ ವಾಸ ಮಾಡುವ ಸಾರ್ವಜನಿಕರು ಗಮನಿಸಿ ಅ ದುರ್ವಾಸನ ತಾಳಲಾರದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಈ ವಿಷಯವನ್ನು ಅವರಿಗೆ ತಿಳಿಸಿದಾಗ ಅವರು ಬೇಕಾಬಿಟ್ಟಿಯಾಗಿ ಸ್ಥಳ ಪರಿಶೀಲನೆ ಮಾಡಿ ಹೋದವರು ಇದುವರೆಗೂ ಕೂಡ ಈ ಕಡೆ ಮುಖ ಮಾಡಿ ನೋಡಿರುವುದಿಲ್ಲ ಮತ್ತು ಆ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿದರೆ ಫೋನ್ ರಿಸೀವ್ ಮಾಡದೆ ಫೋನ್ ಕಟ್ ಮಾಡಿ ಸ್ವಿಚ್ ಆಫ್ ಮಾಡುತ್ತಾರೆ ಮತ್ತು ಅದೇ ರೀತಿಯಾಗಿ ಸಂಬಂಧಪಟ್ಟ ವಾರ್ಡ್ ಸದಸ್ಯರ ಗಮನಕ್ಕೆ ತಂದರು ಕೂಡ ಅವರು ಸ್ಥಳಕ್ಕೆ ಭೇಟಿಕೊಟ್ಟು ಈ ಕಾಮಗಾರಿಯನ್ನು ಇನ್ನೊಂದು ವಾರದೊಳಗಾಗಿ ಸಂಪೂರ್ಣವಾಗಿ ಮುಗಿಸಿಕೊಡುತ್ತೇನೆ ಎಂದು ಸಾರ್ವಜನಿಕರ ಮುಂದೆ ಬರವಸೆಯನ್ನು ಕೊಟ್ಟು ಹೋದವರು.
15 ದಿನಗಳಾದರು ಇತ್ತಕಡೆ ಮುಖ ಮಾಡುತ್ತಿಲ್ಲ ಮತ್ತು ಅವರ ಮನೆಗೆ ಹೋಗಿ ಕೇಳಿದರೆ ಇವತ್ತು ನಾಳೆ ಸರಿ ಮಾಡಿಕೊಡುತ್ತೇನೆ ಎಂದು ಸುಳ್ಳು ಹೇಳಿಕೊಂಡು ಕಾಲ ಕಳೆಯುತ್ತಾರೆ ಹೊರತು ಇ ಕಾಮಗಾರಿ ಮಾಡುವುದರಲ್ಲಿ ಕಿಂಚಿತ್ತು ಕೂಡ ತುಟಿಕ್ ಪಿಟಿಕ್ ಎನ್ನದೆ ಮೌನವಾಗಿದ್ದಾರೆ ಈ ರೀತಿ ಮೌನ ವಹಿಸಿರುವುದು ನೋಡಿದರೆ ಈ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ವಾರ್ಡ್ ಸದಸ್ಯರು ಸುಮ್ಮನಿರುವುದು ನೋಡಿದರೆ ಈ ರೀತಿ ಯಾಕ ಮೌನವಿಸಿದ್ದಾರೆ ತಿಳಿಯದಂತೆ ಆಗಿದೆ.
ಸರ್ಕಾರ ವತಿಯಿಂದ ಎಸ್ ಸಿ. ಎಸ್ ಟಿ. ವಾಸ ಮಾಡುವಂತ ಏರಿಗಳು ಡೆವಲಪ್ಮೆಂಟ್ ಆಗಲೆಂದು ಎಸಿಪಿ ಮತ್ತು ಟಿ ಎಸ್ ಎಸ್ಪಿ ಅಂತಹ ದೊಡ್ಡ ದೊಡ್ಡ ಯೋಜನೆಯು ಸರ್ಕಾರ ಮಂಜೂರು ಮಾಡುತ್ತದೆ ಆದರೆ ಆ ಹಣವನ್ನು ಉಪಯೋಗ ಮಾಡಿಕೊಂಡದ ಅಧಿಕಾರಿಗಳು ಎಸ್ ಸಿ .ಎಸ್ ಟಿ. ಜನಾಂಗ ವಾಸ ಮಾಡುವ ಕಾಲೋನಿಯನ್ನು ಡೆವಲಪ್ಮೆಂಟ್ ಮಾಡುವುದರಲ್ಲಿ ಅಧಿಕಾರಿಗಳು ತೀರ ಹಿಂದೇಟು ಹಾಕುತ್ತಿದ್ದಾರೆ.ಎಂದರೆ ಏನು ಅರ್ಥ ದಲಿತರು ಈ ರೀತಿಯಾಗಿ ದುರ್ವಾಸನೆಯಲ್ಲಿ ಬಾಳಬೇಕೆಂಬ ಅಧಿಕಾರಗಳ ಮನಸ್ಥಿತಿ ಈ ರೀತಿ ಇರುವುದೆಂಬ ಪ್ರಶ್ನೆ ನಮ್ಮಲ್ಲಿ ಕಾಣುತ್ತಿದೆ ಈ ರೀತಿಯಾಗಿ ಹಿಂದೇಟು ಹಾಕುತ್ತಿರುವುದು ನೋಡಿದರೆ ಇವರಿಗೆ ಎಸ್ಸಿ ಎಸ್ಟಿ ವಾಸ ಮಾಡುವ ಕಾಲೋನಿಗಳು ಡೆವಲಪ್ಮೆಂಟ್ ಮಾಡೋದಕ್ಕೆ ಮನಸ್ಸು ಇಲ್ಲವೇ ಅಥವಾ ಯಾರಾದರೂ ರಾಜಕೀಯ ವ್ಯಕ್ತಿಗಳು ಮಾತು ಕೇಳಿ ಈ ರೀತಿಯಾಗಿ ಕುಂಠಿತ ಮಾಡುತ್ತಾರೆ ಎಂಬುದು ತಿಳಿದಂತೆ ಆಗಿದೆ ಎಂದು ಹೇಳಿದರು.
ಒಂದು ವಾರದೊಳಗೆ ಒಳಚರಂಡಿ ಡ್ಯಾಮೇಜ್ ಆಗಿರುವುದನ್ನು ಸರಿ ಮಾಡಿಕೊಡದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ವತಿಯಿಂದ ಮತ್ತು ಈ ವಠಾರದಲ್ಲಿ ವಾಸ ಮಾಡುವ ಸಾರ್ವಜನಿಕರು ಎಲ್ಲಾ ಕುಟುಂಬದವರ ಜೊತೆಗೂಡಿ ಬೃಹತ್ ಮಟ್ಟದಲ್ಲಿ ಹೋರಾಟ ಮಾಡಲಾಗುವುದು. ಮತ್ತು ಮೇ ತಿಂಗಳಲ್ಲಿ ನಡೆಯುವ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುತ್ತದೆ ಎಂದು ಪತ್ರಿಕೆ ಮುಖಾಂತರ ಶಶಿಕುಮಾರ್ ಯುವ ಮುಖಂಡರು ಎಚ್ಚರಿಕೆ ನೀಡಿದ್ದಾರೆ.