
ಕಾರಟಗಿ : ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ, ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ, ಬಾಬಾ ಸಾಹೇಬರ ಚಿಂತನೆಗಳು ಇಂದಿಗೂ ಯುವಜನೆತೆಗೆ ಸ್ಫೂರ್ತಿ ನೀಡುತ್ತಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ | (ಕಲ್ಯಾಣ ಕರ್ನಾಟಕ)ಅಧ್ಯಕ್ಷರಾದ ಆದೆಪ್ಪ ಸಿಂಗನಾಳ ಹೇಳಿದರು.
ಸಿಂಗನಾಳ ಗ್ರಾಮದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಿ ಅವರು ಮಾತನಾಡಿದರು.
ಪ್ರತಿ ವರ್ಷ ಏ.14ರಂದು ಭಾರತದ ಸಂವಿಧಾನ ಶಿಲ್ಪಿ, ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗುತ್ತದೆ.
ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್, ನಮ್ಮ ಜೀವನದಲ್ಲಿ ಬಾಬಾ ಸಾಹೇಬ್ ಆದರ್ಶ ತತ್ವಗಳನ್ನು ಎಂದರು.ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ಭಾರತ ಕಂಡ ಶ್ರೇಷ್ಠ ನಾಯಕರು. ಸಾವಿರಾರು ವರ್ಷಗಳಿಂದ ಗುರಿಯಾಗಿದ್ದವರಿಗೆ ಬೆಳಕಿನ ಸನ್ಮಾರ್ಗ ತೋರಿಸಿ, ದೇಶದ ಭವ್ಯ ಭವಿಷ್ಯವನ್ನು ಬರೆದ ದಲಿತರ, ಶೋಷಿತರ, ಬಡವರ ಆಶಾಕಿರಣ.
ಸಂವಿಧಾನದ ಮೂಲಕ ನಮ್ಮಂತ ಕೋಟ್ಯಾಂತರ ಜನರಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಲು ಅವಕಾಶ ಮಾಡಿಕೊಟ್ಟು, ಧ್ವನಿ ಇರದವರ ಧೈರ್ಯವಾಗಿ, ಮೇಲ್ವರ್ಗದವರಿಂದ ಜೀವನದುದ್ದಕ್ಕೂ ನೋವನ್ನುಂಡು, ಭಾರತಕ್ಕೆ ಮಹಾಶಾಪವಾಗಿ ಕಾಡುತ್ತಿದ್ದ ಅಸ್ಪೃಶ್ಯತೆಯನ್ನು ಮೆಟ್ಟಿನಿಂತು,

ಸದಸ್ಯರಾದ ಹುಸೇನಪ್ಪ ಸಿಂಗನಾಳ, ಹನುಮೇಶ್ ನಾಯಕ್, ಶ್ರುತಿ ಬಸವರಾಜ್ ಹೊಸಕೇರಾ, ಹಾಗೂ ಮುಖಂಡರಾದ ನಿಂಗನಗೌಡ ಪೊಲೀಸ್ ಪಾಟೀಲ್,ನಾಗಪ್ಪ ನವಲಿ,ಕಟ್ಟಡ ಕಾರ್ಮಿಕ ಅಧ್ಯಕ್ಷರಾದ ಮಹೇಶ್ ಮೇಸ್ತ್ರಿ, ಶೇಖರಪ್ಪ ವಾಣಿಜ್ಯ ಉದ್ಯಮಿಗಳು, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲನಗೌಡ,
ಮೇರಪರ್ವತವಾಗಿ ಬೆಳೆದುನಿಂತ ಮಹಾನ್ ದಾರ್ಶನಿಕ, ಭಾರತ ಭಾಗ್ಯವಿಧಾತ, ಭಾರತ ರತ್ನ, ವಡಿಸಿ, ಸಂವಿಧಾನ ಶಿಲ್ಪಿ, ವಿಶ್ವ ವಿಜ್ಞಾನಿ ಡಾ| ಬಿ.ಆರ್.ಅಂಬೇಡ್ಕರ್ ಇವರನ್ನು ಸಾಮಾನ್ಯವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಕರೆಯಲಾಗುತ್ತಿತ್ತು ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರುದ್ರೇಶ್,
ಅಜೀರ್, ಕನಕಪ್ಪ, ಭೀಮೇಶ್, ಹನುಮೇಶ್ ಮಂಜುನಾಥ್, ವೀರೇಶ್ ಆಗೋಲಿ,ಮರಿಯಪ್ಪ, ಕರಿಯಪ್ಪಪರಶುರಾಮ್ ಆಗೋಲಿ, ಪೂಜೇಶ್, ಕಂಟೆಪ್ಪ ಲಕ್ಷ್ಮಣ ಗ್ಯಾಂಗಮನ ಹಾಗೂ ಊರಿನ ಯುವಕರು ಅಭಿಮಾನಿಗಳು ಸೇರಿದಂತೆ ಅನೇಕರಿದ್ದರು.