ದಕ್ಷಿಣ ಕಾಶಿ ನಂಜನಗೂಡಿನಲ್ಲಿ ವಿಜೃಂಭಣೆ ಹಾಗೂ ಶ್ರದ್ಧಾ ಭಕ್ತಿಯಿಂದ ನಡೆದ ಚಿಕ್ಕಜಾತ್ರೆ ರಥೋತ್ಸವ
ಇಂದು ಬೆಳಿಗ್ಗೆ 9.30 ರಿಂದ 10:40 ಗಂಟೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು
ಅಪರ ಜಿಲ್ಲಾಧಿಕಾರಿ ಹಾಗೂ ಆಡಳಿತಾಧಿಕಾರಿ ಡಾ. ಮಂಜುನಾಥ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷಿತ್ ರಥಕ್ಕೆ ಪೂಜೆ ಸಲ್ಲಿಸಿ ಚಕ್ರಗಳಿಗೆ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು


ದೇವಾಲಯದಿಂದ ಹೊರ ತಂದ ಪಾರ್ವತಿ ಸಮೇತ ಶ್ರೀ ಶ್ರೀಕಂಠೇಶ್ವರ ಸ್ವಾಮಿ, ಗಣಪತಿ ಮತ್ತು ಚಂಡಿಕೇಶ್ವರ ಹಾಗೂ ಶ್ರೀ ಮನೋನ್ಮಣಿ ಅಮ್ಮನವರ ಉತ್ಸವ ಮೂರ್ತಿಗಳನ್ನು ದೇವಾಲಯದ ಪ್ರಾಂಗಣದಲ್ಲಿರಿಸಿ ಪೂಜೆ ಸಲ್ಲಿಸಲಾಯಿತು
ಬಳಿಕ ಬಣ್ಣ ಬಣ್ಣದ ಬಾವುಟ ಹಾಗೂ ಬಂಟಿಂಗ್ಸ್ ಮತ್ತು ಹೂಗಳಿಂದ ಅಲಂಕರಿಸಲಾಗಿದ್ದ ರಥಗಳಲ್ಲಿ ಕ್ರಮವಾಗಿ ಗಣಪತಿ ಚಂಡಿಕೇಶ್ವರ, ಪಾರ್ವತಿ ಸಮೇತ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಮತ್ತು ಶ್ರೀ ಮನೋನ್ಮಣಿ ಅಮ್ಮನವರ ಉತ್ಸವ ಮೂರ್ತಿಗಳನ್ನು ಮೂರು ರಥಗಳಲ್ಲಿ ಕೂರಿಸಿ ಪಟ್ಟಣದ ರಥ ಬೀದಿಯಲ್ಲಿ ರಥೋತ್ಸವ ನಡೆಸಲಾಯಿತು.


ಇಂದು ವಿಶೇಷ ಹುಣ್ಣಿಮೆಯ ದಿನವೂ ಆದ್ದರಿಂದ ವಿವಿದಡೆಯಿಂದ ದೇವಾಲಯಕ್ಕೆ ಭಕ್ತರ ಮಹಾಪೂರವೇ ಹರಿದು ಬಂದಿತ್ತು


ಹಾಗಾಗಿ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತೇರುಗಳನ್ನು ಎಳೆಯುವ ಮೂಲಕ ಮತ್ತು ತೇರಿಗೆ ಹಣ್ಣು ದವನ ಎಸೆದು ತಮ್ಮ ಭಕ್ತಿ ಭಾವ ಮೆರೆದರು‌.


ಯಾವುದೇ ಅಹಿತಕರ ಘಟನೆ ನಡೆಯದೆ ರಥೋತ್ಸವವು ಸರಿಯಾದ ಸಮಯಕ್ಕೆ ಬಂದು ಸ್ವಸ್ಥಾನ ಸೇರಿತು.
ದೇವಾಲಯದ ಆಗಮಿಕರಾದ ಶ್ರೀ ನೀಲಕಂಠ ದೀಕ್ಷಿತ್ ಮಾತನಾಡಿ ಚಿಕ್ಕ ಜಾತ್ರೆಯ ವಿಶೇಷತೆ ಬಗ್ಗೆ ವಿವರಿಸಿದರು.

error: Content is protected !!