
ಬೆಂಗಳೂರು : ಬಂಡಾಯ ಅಭ್ಯರ್ಥಿಗಳನ್ನು ‘ಜೆಡಿಎಸ್’ ಗೆ ಸೇರಿಸಿಕೊಳ್ಳುವುದೇ ಕುಮಾರಸ್ವಾಮಿ ಕೆಲಸ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ ಬಂಡಾಯ ಅಭ್ಯರ್ಥಿಗಳನ್ನು ‘ಜೆಡಿಎಸ್’ ಗೆ ಸೇರಿಸಿಕೊಳ್ಳುವುದೇ ಕುಮಾರಸ್ವಾಮಿ ಕೆಲಸವಾಗಿದೆ.
ಟಿಕೆಟ್ ಸಿಗದವರನ್ನು ಕರೆಸಿಕೊಳ್ಳುವುದು, ಪಕ್ಷಕ್ಕೆ ಕರೆತಂದು ಟಿಕೆಟ್ ನೀಡುವುದು ಅವರ ಕೆಲಸವಾಗಿದೆ ಎಂದು ಲೇವಡಿ ಮಾಡಿದರು. ಇದಕ್ಕಾಗಿ ಬಿಜೆಪಿ ಜೆಡಿಎಸ್ ನವರು ಕಾಯುತ್ತಿದ್ದಾರೆ ಎಂದರು.
ಒಂದು ಕ್ಷೇತ್ರದಲ್ಲಿ 15-20 ಜನ ಟಿಕೆಟ್ ಆಕಾಂಕ್ಷಿಗಳಿರುತ್ತಾರೆ, ಎಲ್ಲರಿಗೂ ಟಿಕೆಟ್ ನೀಡಲು ಆಗಲ್ಲ ಎಲ್ಲರ ಜೊತೆ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.