ಗಂಗಾವತಿ  :ಗಂಗಾವತಿ ಸಮೀಪದ ಇಂದರಗಿ ಗ್ರಾಮದಲ್ಲಿ ಇಂದು ಸಾರ್ವತ್ರಿಕ ವಿಧಾನ ಸಭಾ ಚುನಾವಣೆ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು,ಚುನಾವಣೆ ನ್ಯಾಯ ಸಮೃತವಾಗಿ ಶಾಂತಿಯುತವಾಗಿ ನಡೆಸಲು ಕೊಪ್ಪಳ ನಗರದ  ಮಹಿಳಾ ಪೊಲೀಸ್ ಠಾಣೆಯ ಸಿಪಿಐ ಆಂಜನೇಯ ಡಿ, ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್ಐ ಅಮರೇಗೌಡ ನೇತೃತ್ವದಲ್ಲಿ ಆಕರ್ಷಕ ಪಂಥ ಸಂಚಲನ ಜರಗಿತು.

ಚುನಾವಣೆ ಕರ್ತವ್ಯಕ್ಕೆ ಆಗಮಿಸಿದ ಐಟಿಬಿಪಿ ಪಡೆ ಹಾಗೂ ಪೊಲೀಸ್ ಪಡೆಗಳಿಂದ ಇಂದರಗಿ ಗ್ರಾಮದಲ್ಲಿ 5 ವಾರ್ಡ್ ಗಳಲ್ಲಿ ಶ್ರೀ ಇಂದರೇಶ್ವರ ದೇವಸ್ಥಾನ ಮುಂಭಾಗದ ಮೂಲಕ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ‌ನಡೆಸಿ ದಾರಿ ಉದ್ದಕ್ಕೂ ಸ್ಥಳೀಯರು ಭದ್ರತಾ ಪಡೆಗಳ ಮೇಲೆ ಹೂವಿನ ಸುರಿಮಳೆಗೈದು ಅದ್ದೂರಿಯಾಗಿ  ಸ್ವಾಗತಿಸಿದರು ಹಾಗೂ ಅತಿ ಸೂಕ್ಷ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೋಸ್೯ ನಿಯೋಜನೆ ಮಾಡಲಾಗುವುದು ಎಂದು ಕೊಪ್ಪಳ ಮಹಿಳೆ ಪೊಲೀಸ್ ಠಾಣೆಯ ಸಿಪಿಐ ಆಂಜನೇಯ ಡಿ,ತಿಳಿಸಿದರು.

ಈ ಸಂದರ್ಭದಲ್ಲಿ  ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಂತಪ್ಪ ಭೋವಿ,ಗ್ರಾ.ಪಂ.ಸದಸ್ಯ ಗವಿಸಿದ್ದಪ್ಪ ಹಾವರಗಿ,ಡಾ.ನಾಗರಾಜ ಕಂಬಳಿ,ಅಮರೇಶ ಕೊಪ್ಪಳ, ಗ್ರಾಮದ‌ ಮುಖಂಡರಾದ ಪಂಪಣ್ಣ ಕುಂಬಾರ ದಳಪತಿ,ಡಾ.ಅಮರೇಶ ಕುಂಬಾರ,ಆದೇಯಪ್ಪ ಬೇಟಗೇರಿ,ದೇವಪ್ಪ ಭೋವಿ,ಪರಣ್ಣ ಪೂಜಾರ,ಇಂದ್ರೇಶ ಕೇರಳಿ,ನಾಗಪ್ಪ ಪೂಜಾರ,ಹನುಮಂತಪ್ಪ ಪೂಜಾರ,ಹುಚ್ಚಪ್ಪ ಹಿರೇಕುರಬರ,ಬಾಳಪ್ಪ ಸಿರೂರು,ರಮೇಶ ಕಾಮನೂರು,ಗಾಳೇಪ್ಪ ಹೆಚ್,ಪರಶುರಾಮ ವಣಗೇರಿ,ಹುಲಗಜ್ಜ ಹೆಚ್,ಆನಂದ ಕುರಿ,ಪಂಪಾಪತಿ ಹೂಗಾರ,ಪರಶುರಾಮ ಮಜ್ಜಗಿ,ಮಂಜುನಾಥ ಕುಂಬಾರ,ಸಿದ್ದಪಗಪ ಎಮ್ಮಿ, ಮಂಜುನಾಥ ಹೂಗಾರ,ಸೇರಿದಂತೆ ಇತರರು ಇದ್ದರು

error: Content is protected !!