ಕೊಪ್ಪಳ: ಅಕ್ರಮ ಮದ್ಯ, ಮದ್ಯಸಾರ ಸಾಗಾಣಿಕೆಯ ಬಗ್ಗೆ ನಿಗಾವಹಿಸಲು ಜಿಲ್ಲಾ ಹಾಗೂ ವಲಯ ಮಟ್ಟದಲ್ಲಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಕೊಪ್ಪಳ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆಯಿಂದ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಯುಕ್ತ ಜಿಲ್ಲಾ ವ್ಯಾಪ್ತಿಯಲ್ಲಿ ನಕಲಿ ಮದ್ಯ ತಯಾರಿಕೆ, ಕಳ್ಳಭಟ್ಟಿ ತಯಾರಿಕೆ, ಹೊರ ರಾಜ್ಯದಿಂದ ಬರುವ ವಾಹನ ಹಾಗೂ ರೈಲು ಗಾಡಿಗಳ ಮೂಲಕ ಅಕ್ರಮ ಮದ್ಯ, ಮದ್ಯಸಾರ ಸಾಗಾಣಿಕೆಯ ಬಗ್ಗೆ ಜಿಲ್ಲಾ ಮತ್ತು ವಲಯ ಮಟ್ಟದಲ್ಲಿ ರಚಿಸಲಾಗಿರುವ ಕಂಟ್ರೋಲ್ ರೂಂಗಳಲ್ಲಿ ಸಿಬ್ಬಂದಿ ನಿಯೋಜಿಸಲಾಗಿರುತ್ತದೆ. ಈ ಕಚೇರಿಗಳಲ್ಲಿ ದಿನದ 24 ಗಂಟೆ ದೂರವಾಣಿಗಳ ಮೂಲಕ ದೂರುಗಳನ್ನು ಸ್ವೀಕರಿಸಲಾಗುವುದು.

ಜಿಲ್ಲಾ ಕಂಟ್ರೋಲ್ ರೂಂ: ಅಕ್ರಮ ಮದ್ಯ, ಮದ್ಯಸಾರ ಸಾಗಾಣಿಕೆಯ ಬಗ್ಗೆ ನಿಗಾವಹಿಸಲು ಜಿಲ್ಲಾ ಕಂಟ್ರೋಲ್ ರೂಂ ಅನ್ನು ಕೊಪ್ಪಳ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದು, ದೂರವಾಣಿ ಸಂಖ್ಯೆ: 08539-222002, ಫ್ಯಾಕ್ಸ್ ಸಂದೇಶ 08539-222001, ಟೋಲ್ ಫ್ರೀ ಸಂಖ್ಯೆ: 18004253074 ಹಾಗೂ ಇ-ಮೇಲ್  [email protected] ಮೂಲಕ ಸಾರ್ವಜನಿಕರು ದೂರು ಸಲ್ಲಿಸಬಹುದು.

ವಿಧಾನಸಭಾ ಕ್ಷೇತ್ರವಾರು ಅಧಿಕಾರಿಗಳ ನಿಯೋಜನೆ: ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಕೊಪ್ಪಳ ವಲಯದ ಅಬಕಾರಿ ನಿರೀಕ್ಷಕರಾದ ರಮೇಶ ಬಿ ಅಗಡಿ ದೂ.ಸಂ: 08539-222384, ಮೊ.ಸಂ: 9980736564 ಇವರನ್ನು ನಿಯೋಜಿಸಲಾಗಿದೆ. ಗಂಗಾವತಿ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಗಂಗಾವತಿ ವಲಯದ ಅಬಕಾರಿ ನಿರೀಕ್ಷಕರಾದ ವಿಠ್ಠಲ್ ಪಿರಗಣ್ಣನವರ ದೂ.ಸಂ: 08533-230527, ಮೊ.ಸಂ: 8971273801 ಇವರನ್ನು ನಿಯೋಜಿಸಲಾಗಿದೆ. ಕುಷ್ಟಗಿ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಕೊಪ್ಪಳ ವಲಯದ ಅಬಕಾರಿ ನಿರೀಕ್ಷಕರಾದ ಶಂಕರ ದೊಡ್ಡಮನಿ ದೂ.ಸಂ: 08536-267247, ಮೊ.ಸಂ: 8496089180 ಇವರನ್ನು ನಿಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!