
ಅಮೃತ ನಗರ ಯೋಜ ನೆ ವ್ಯಾಪಕ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿಯ ಬಗ್ಗೆ. ಅಧಿಕಾರಿಗಳನ್ನು
ಅಮಾನತುಗೊಳಿಸುವಂತೆ ಒತ್ತಾಯಿಸಿ, ಉತ್ತರ ಕರ್ನಾಟಕ ಯುವ ವೇದಿಕೆ, ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಲ ಯ ಮುಂದೆ ಬೃಹತ್ ಪ್ರತಿಭಟನೆ.
ಕೊಪ್ಪಳ : ಕೇಂದ್ರ ಸರ್ಕಾರದ, ಮಹತ್ವ ಯೋಜನೆಗಳಲ್ಲಿ ಒಂದಾದ ಅಮೃತ ನಗರ ಯೋಜನೆಯ, ವಿವಿಧ ಕಾಮಗಾರಿಗಳು ಅತ್ಯಂತ ಕಳಪೆ ಮಟ್ಟದಿಂದ, ಹಾಗೂ ವ್ಯಾಪಕ ಭ್ರಷ್ಟಾಚಾರದಿಂದ ಕೂಡಿತ್ತು, ಈ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ಯೋಜನೆಯ ಅಡಿಯಲ್ಲಿ ಬರುವ ಎಲ್ಲಾ ಕಾಮಗಾರಿಗಳ ಪರಿಶೀಲನೆ ಹಾಗೂ, ಭ್ರಷ್ಟಾಚಾರ ನಡೆಸಿದ ಕಾರ್ಯಪಾಲಕ ಅಧಿಕಾರಿಗಳ ವಿರುದ್ಧ, ಸೂಕ್ತ ತನಿಖೆ ಸೇವೆಯಿಂದ ಅಮಾನತುಗೊಳಿಸಬೇಕೆಂದು ಎಂದು ಒತ್ತಾಯಿಸಿ, ಉತ್ತರ ಕರ್ನಾಟಕ ಯುವ ವೇದಿಕೆಯ ನೇತೃತ್ವದಲ್ಲಿ, ಸೋಮವಾರದಂದು ಕೊಪ್ಪಳದ ಜಿಲ್ಲಾಧಿಕಾರಿಗಳ ಕಾರ್ಯಗಳು ಮುಂದೆ, ಬೃಹತ್ ಪ್ರತಿಭಟನೆ ನಡೆಸಲಾಯಿತು.

ವೇದಿಕೆ ಸಂಸ್ಥಾಪಕ ಅಧ್ಯಕ್ಷ ರಮೇಶ್ ನಾಯಕ್ ಜೋಗಿ ನ್ ಮಾತನಾಡಿಪ್ರಸಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ಹಲವು ಮಾಧ್ಯಮಗಳಲ್ಲಿ,, ಜೊತೆಗೆ ಲೋಕಾಯುಕ್ತ ಅಧಿಕಾರಿಗಳು ಸಹ, ಗಂಗಾವತಿ ನಗರಕ್ಕೆ ಆಗಮಿಸಿ, ತನಿಖೆ ನಡೆಸಿ ಹಲವು ತಿಂಗಳು,, ಗತಿಸಿದರು ಸಹ ಇದುವರೆಗೂ ಕಾರ್ಯಪಾಲಕ ಅಧಿಕಾರಿಗಳ ವಿರುದ್ಧ, ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳದ ಬಗ್ಗೆ ಖಂಡಿಸಿ ದ ರು, ನಗರಸಭೆಯ ಪ್ರಭಾವಿ ಒಬ್ಬರು ನಿವೃತ್ತ ಅಧಿಕಾರಿ ಕಾರ್ಯಪಾಲಕರ ಕುತಂತ್ರದಿಂದ, ಯೋಜನೆಯ ಅಡಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಜರುಗಿದ್ದು, ಹಣ, ಒಳ ಚರಂಡಿ ಗೆ ಹಾಕಿದಂತಾಗಿದ್ದು, ಯೋಜನೆಗಳು ಸಂಪೂರ್ಣ ಹಳ್ಳ ಹಿಡಿದಿವಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಈಗಾಗಲೇ ನಗರಸಭೆಯ ಪ್ರಭಾವಿ ಶಂಕರಗೌಡ ಎಂಬುವರು ತಮ್ಮ ಇನ್ನೊಬ್ಬ ಅಧಿಕಾರಿಗಳೊಂದಿಗೆ, ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ವೈರಲ್ ಆಗಿದೆ, ಹೀಗಾಗಿ ಮಾನ್ಯ ಜಿಲ್ಲಾಧಿಕಾರಿಗಳು, ಅಮೃತ ನಗರ ಯೋಜನೆಯ ಎಲ್ಲಾ ಕಾಮಗಾರಿಗಳನ್ನು, ಪರಿಶೀಲಿಸಿ, ಲೋಪ ಹಾಗೂ ಭ್ರಷ್ಟಾಚಾರವೇ ಸಿಗದ ಅಧಿಕಾರಿಗಳನ್ನು, ಕಾನೂನು ಶಿಸ್ತು ಕ್ರಮ ತೆಗೆದುಕೊಳ್ಳಬೇಕು, ಶುದ್ಧವಾದ ಕುಡಿಯುವ ನೀರು, ಹಲವು ವಾರ್ಡ್ಗಳಲ್ಲಿ ಸೋರಿಕೆಯಿಂದಾಗಿ, ವ್ಯರ್ಥವಾಗಿ ಹರಿದು ಹೋಗುವುದರ ಜೊತೆಗೆ ನಗರದ ಜನತೆ ನೀರಿಗೆ ಪರದಾಡುವಂತೆ ಆಗಿದೆ, ಹಾಗೆ ಒಳಚರಂಡಿ ಕಾಮಗಾರಿ, ಆ ವೈಜ್ಞಾನಿಕತೆಯಿಂದ, ಕೂಡಿದ್ದು, ಸಮರ್ಪಕವಾಗಿ, ಚರಂಡಿಯಲ್ಲಿ ನೀರು ಹೋಗದೆ ವಾರ್ಡ್ಗಳಲ್ಲಿ ಹರಿದು ಬರುವುದು ಜೊತೆಗೆ, ಸಾಂಕ್ರಾಮಿಕ ರೋಗ ತಾಣವಾಗೀ ಮಾರ್ಪಟ್ಟಿದೆ.
ಪ್ರಯುಕ್ತ, ಪ್ರಾಮಾಣಿಕತೆ ಹಾಗೂ ದಕ್ಷತೆಗೆ ಹೆಸರಾದ, ಜಿಲ್ಲಾಧಿಕಾರಿಗಳು, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ ರು,, ಈ ಸಂದರ್ಭದಲ್ಲಿ, ಪಂಪಾಪತಿ, ಮಾರಪ್ಪ, ಹನುಮಂತು ವೆಂಕಟೇಶ್ ಉಪ್ಪಾರ್ ಮಲ್ಲಪ್ಪ, ಅಯ್ಯಪ್ಪ, ಬಸಪ್ಪ ಇತರರು, ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳಿಗೆ, ದಾಖಲೆ ಸಮಿತ ಮನವಿ ಪತ್ರ ಸಲ್ಲಿಸಿದರು