
ಗಂಗಾವತಿ: ನ್ಯಾಯಮೂರ್ತಿ ಎ.ಜಿ ಸದಾಶಿವ ಆಯೋಗದ ವರದಿ ಅನುಮೋದನೆಗೊಳಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಕರ್ನಾಟಕ ಮಾದಿಗ ದಂಡೋರ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷರಾದ ಬಿ. ಹುಸೇನಪ್ಪಸ್ವಾಮಿ ಮಾದಿಗ ತಿಳಿಸಿದರು.
ಅವರು ಇಂದು ನ್ಯಾಯಮೂರ್ತಿ ಎ.ಜಿ ಸದಾಶಿವ ಆಯೋಗ ವರದಿ ಜಾರಿಗಾಗಿ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡುತ್ತಿದ್ದರು.

ಮಾದಿಗ ಸಮಾಜವು ರಾಜ್ಯಾಧ್ಯಂತ ಬಿಜೆಪಿ
ಪರವಾಗಿದ್ದು, ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕೆನ್ನುವ ಜನಾಂಗವಾಗಿದೆ.ಭೋವಿ, ಲಮಾಣಿ, ಭಜಂತ್ರಿ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ಮಾತ್ರ ಪರಿಶಿಷ್ಟ ವರ್ಗಕ್ಕೆ ಸೇರಿದ ಸ್ಪøರ್ಶ ಜನಾಂಗಗಳಾಗಿವೆ. ಅವರು ಶೋಷಿತ ವರ್ಗದವರಲ್ಲ.
ಆದರೆ ನಮ್ಮ ಮಾದಿಗ ಜನಾಂಗವು ಮೂಲ
ಶೋಷಿತ ಅಸ್ಪøಶ್ಯ ಜನಾಂಗವಾಗಿದೆ. ಶೋಷಿತ ವರ್ಗದವರಿಗೆ ಮಾದಿಗ ಮತ್ತು ಚಲುವಾದಿ ಸಮಾಜಕ್ಕೆ ಭಾರತ ದೇಶದಲ್ಲಿ ಒಂದೇ ಪರಿಶಿಷ್ಟ ಜಾತಿ ಸಮಾಜವಾಗಿದ್ದು, ಈ ಸಮಾಜಕ್ಕೆ ಶಾಸಕಾಂಗದಲ್ಲಿ ದೌರ್ಜನ್ಯವನ್ನು ಎಸಗಿ, ಆ ದೌರ್ಜನ್ಯವನ್ನು ಮಾಡುವ ಜನಾಂಗದವರ ಮಾತನ್ನು ಸರ್ಕಾರ ಕೇಳುತ್ತಾ ಹೋದರೆ ಶೋಷಿತ ಜನಾಂಗಕ್ಕೆ ಅನ್ಯಾಯ ಮಾಡಿದಂತಾಗುತ್ತದೆ.
ಕಾರಣ ಸರ್ಕಾರ ಕೂಡಲೇ ತೀರ್ಮಾನ
ತೆಗೆದುಕೊಂಡು, ನ್ಯಾಯಮೂರ್ತಿ ಎ.ಜಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದೇವೆ ಎಂದು ತಿಳಿಸಿ, ಒಂದು ವೇಳೆ ಬಿಜೆಪಿ ಸರ್ಕಾರವು ಹಿಂದಿನ ಕಾಂಗ್ರೆಸ್ ಸರ್ಕಾರದಂತೆ ಕೇವಲ ಮಾತಿನಲ್ಲಿ
ಹೇಳುತ್ತಾ ಹೋದರೆ ಸರ್ಕಾರದ ವಿರುದ್ಧ ಕರಪತ್ರ
ಚಳುವಳಿಯನ್ನು ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ
ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಮಾದಿಗ ದಂಡೋರ ಸಮಿತಿಯ ಹನುಮಂತಪ್ಪ ಹೊಸಕೇರಾ, ಸಣ್ಣ ಹುಲುಗಪ್ಪ, ಹನುಮಂತ ಅಯೋಧ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.