
ಕೊಪ್ಪಳ : ಸಾರ್ವಜನಿಕರಿಗೆ ಸಕಾಲದಲ್ಲಿ ಮಾಹಿತಿ ನೀಡದೆ ನಿರ್ಲಕ್ಷ ತೋರಿದ ಗಂಗಾವತಿ ತಾಲೂಕು ಪಂಚಾಯತ್ ಅಧಿಕಾರಿಗೆ ರಾಜ್ಯ ಮಾಹಿತಿ ಆಯೋಗ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದೆ.
ಗಂಗಾವತಿ ತಾಲೂಕು ಪಂಚಾಯತ್ ಮ್ಯಾನೇಜರ್ ಶಾಂತವೀರಯ್ಯ ಸ್ವಾಮಿ ಹಿರೇಮಠ ಎಂಬ ಸಾರ್ವಜನಿಕ ಮಾಹಿತಿ ಅಧಿಕಾರಿ ಅತ್ಯಂತ ನಿರ್ಲಕ್ಷ ವಹಿಸಿದ ಹಿನ್ನಲೆ ಮಾಹಿತಿ ಆಯೋಗವು 15 ಸಾವಿರ ತಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದೆ.

ಕೊಪ್ಪಳದ ಆರ್‌ಟಿಐ ಕಾರ್ಯಕರ್ತ ಸಲೀಂ ಮಂಡಲಗೇರಿ ಎಂಬುವವರು ತಾಲೂಕು ಪಂಚಾಯತ್ ನಗದು ಪುಸ್ತಕ ಮಾಹಿತಿ ಕೇಳಿದ್ದರು ಮಾಹಿತಿ ನೀಡದೆ ನಿರ್ಲಕ್ಷ ವಹಿಸಿ ಮಾಹಿತಿ ಹಕ್ಕು ಉಲ್ಲಂಘಿಸಿದ ಆರೋಪ ದಡಿ ವ್ಯವಸ್ಥಾಪಕ ಶಾಂತವೀರಯ್ಯ ಸ್ವಾಮಿ ಹಿರೇಮಠ ಸಕಾಲಕ್ಕೆ ಮಾಹಿತಿ ಒದಗಿಸಲು ವಿಳಂಬ ಮಾಡಿದ ಹಿನ್ನೆಲೆ ದಂಡಕ್ಕೆ ಗುರಿಯಾಗಿದ್ದಾರೆ.
ಇದೊಂದೇ ಯಲ್ಲ ತಾಲೂಕು ಸಾರ್ವಜನಿಕರು ತಾಲೂಕು ಪಂಚಾಯಿತಿಯಲ್ಲಿ ಮಾಹಿತಿ ಕೇಳಿದರೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಶೋಚನೆಯ ಸಕಾಲಕ್ಕೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವಲ್ಲಿ ವಿಳಂಬ ಧೋರಣೆ ಮಾಡುತ್ತಿದ್ದು ಇಂತಹ ನಿರ್ಲಕ್ಷ ತೋರುತ್ತಿರುವ ಅಧಿಕಾರಿಯನ್ನು ತಕ್ಷಣ ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ಮಲ್ಲೇಶ ಒತ್ತಾಯಿಸಿದ್ದಾರೆ…..
ಇಂತಹ ನಿರ್ಲಕ್ಷ ತೋರುವ ಅಧಿಕಾರಿ ನಮ್ಮ ತಾಲೂಕು ಪಂಚಾಯಿತಿಗೆ ಬೇಡ ಬೆರಡೆ ವರ್ಗಾವಣೆ ಮಾಡಿ ಸರಿಯಾಗಿ ಮತ್ತು ನಿಷ್ಪಕ್ಷಪಾತಾವಾಗಿ ಕೆಲಸ ಮಾಡುವವರನ್ನು ನಮಗೆ ಬೇಕು ಎಂದು ಕರ್ನಾಟಕ ದಲಿತರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಹೆಚ್ ವಸಂತ್ ಕುಮಾರ್ ಕಟ್ಟಿಮನಿ ಉತ್ತರಿಸಿದ್ದಾರೆ…..