
ಕೋಪ್ಪಳ: ‘ಕೇವಲ ಧರ್ಮ ರಾಜಕಾರಣ, ಹುಸಿ ಸುಳ್ಳುಗಳ ಮೂಲಕ ದೇಶವನ್ನು ಶೋಷಣೆ ಮಾಡುತ್ತಿರುವ ಬಿಜೆಪಿ ಧರ್ಮವನ್ನೇ ರಾಜಕೀಯಗೊಳಿಸುತ್ತಿರುವುದು ಕಳವಳಕಾರಿ ಸಂಗತಿ’ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ‘ಬಿಜೆಪಿ ಧರ್ಮ ಒಡೆದು, ಜಾತಿಯ ವಿಷ ಬೀಜ ಬಿತ್ತಿ, ಸಂಬಂಧವೇ ಇಲ್ಲದ ಯಾವುದೋ ದೇಶದ ಕಥೆ ಹೇಳಿ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಿದೆ. ಅಭಿವೃದ್ಧಿ ಮಾಡಲಾಗದೆ ಹೊಸ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳಲು ಧರ್ಮ ರಾಜಕಾರಣ ಮಾಡುತ್ತಿದೆ’ ಎಂದಿದ್ದಾರೆ.
‘ಧರ್ಮ, ಸಂಸ್ಕಾರನು, ಶಿಕ್ಷಣ ನೀಡಿ ಜನ ಸನ್ಮಾರ್ಗದಲ್ಲಿ ಹೋಗುವಂತೆ ಮಾಡಬೇಕಿದ್ದ ಸ್ವಾಮೀಜಿಗಳನ್ನು ಪಕ್ಷಕ್ಕೆ ಕರೆದು ಧರ್ಮವನ್ನು ಕಲುಷಿತಗೊಳಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಮಠಗಳೂ ಒಡೆಯುವಂತೆ ಮಾಡುವ ಬಿಜೆಪಿ ನಾಯಕರ ಹುನ್ನಾರಕ್ಕೆ ಜನತೆ ಸೊಪ್ಪು ಹಾಕಬಾರದು, ಒಂದೆಡೆ ಸಿದ್ದರಾಮಯ್ಯ ಅವರು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದನ್ನು ರಾಷ್ಟ್ರೀಯ ಸುದ್ದಿಯನ್ನಾಗಿಸಿದ ಬಿಜೆಪಿ, ಅದೇ ಸಿಟಿ ರವಿ ಮಟನ್ ತಿಂದು ಹನುಮನ ಮಂದಿರಕ್ಕೆ ಹೋಗಿಜನರ ಭಾವನೆಗಳ ಜೊತೆಗೆ ಬಿಜೆಪಿ ಚೆಲ್ಲಾಟವಾಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.