ಗಂಗಾವತಿ: ಗಂಗಾವತಿ ನಗರದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪೋಲಿಸ್ ಇಲಾಖೆಯಿಂದ ಪಥ ಸಂಚಲನ ಮಾಡಲಾಯಿತು.

ನಂತರ ಜಿಲ್ಲಾ ವರಿಷ್ಠ ಪೋಲಿಸ್ ಅಧಿಕಾರಿ ಅರುಣಾಂಕ್ಷುಗಿರಿ ಮಾತನಾಡಿ, ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತವಾದ ಬಂದೋಬಸ್ತು ಮಾಡಲಾಗಿದೆ. ಅಂಜನಾದ್ರಿ ಬೆಟ್ಟದಲ್ಲಿ ಹನುಮಾನ್ ಮಾಲಾಧಿಕಾರಿಗಳು ಮಾಲೆ ವಿಸರ್ಜನೆ ಮಾಡುತ್ತಾರೆ. ನಗರದಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಪೋಲಿಸ್ ಅಧಿಕಾರಿಗಳನ್ನು ನೇಮಿಸಿ, ಹನುಮಾನ್ ಭಕ್ತಾದಿಗಳಿಗೆ ಸುವ್ಯವಸ್ಥಿತ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ಗಂಗಾವತಿ ನಗರದ ನಾನಾ ವೃತ್ತಗಳಲ್ಲಿ ಪಥ ಸಂಚಲನ ಮಾಡಿ, ಜನರಿಗೆ ತಿಳಿವಳಿಕೆ ನೀಡಿದರು. ವಿವಿಧ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಿಂದ ಪೋಲಿಸ್ ಸಿಬಂಧಿಗಳು ಬಂದಿದ್ದು. 1 ಎಸ್.ಪಿ, 5 ಡಿ.ವೈ.ಎಸ್.ಪಿ, 1 ಅಡಿಷನಲ್‌ ಎಸ್.ಪಿ, 15 ಇನ್ಸ್ಪೆಕ್ಟರ್‌, 40 ಸಬ್-ಇನ್ಸ್ಪೆಕ್ಟರ್ ಇರುವವರು ಎಂದು ತಿಳಿಸಿದರು.
ಬಸ್ ನಿಲ್ದಾಣ ಹತ್ತಿರ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿದ್ದು ನಂತರ ಪುಣ್ಯಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳುವವರು ಹಾಗೂ ರಾಜ್ಯ ಮಟ್ಟದ ನಾಯಕರಾದ ಸಚಿವೆ ಶಶಿಕಲಾ ಜೊಲ್ಲೆ ಬರುವ ಸಾದ್ಯತೆ ಇದೆ ಎಂದು ಮಾಧ್ಯಮದವರಿಗೆ ತಿಳಿಸಿದರು.

error: Content is protected !!