
ನವದೆಹಲಿ: ಅದಾನಿ ಕಂಪನಿಯು (Adani Enterprises) ಫಾಲೋನ್ ಆನ್ ಪಬ್ಲಿಕ್ ಆಫರ್(FPO) ಹಿಂದಕ್ಕೆ ಪಡೆದಿರುವುದರಿಂದ ಆರ್ಥಿಕತೆ ಹಾಗೂ ದೇಶದ ಆರ್ಥಿಕತೆ ಇಮೇಜ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಅದಾನಿ ಷೇರುಗಳ ಗೋಲ್‌ಮಾಲ್‌ಗೆ ಸಂಬಂಧಿಸಿದ ವಿಷಯವನ್ನು ಮಾರುಕಟ್ಟೆಯ ನಿಯಂತ್ರಕರು ನೋಡಿಕೊಳ್ಳುತ್ತಾರೆ. ಯಾವ ರೀತಿಯ ಕ್ರಮವನ್ನು ಕೈಗೊಳ್ಳಬೇಕು ಎಂಬುದನ್ನು ಅವರು ನಿರ್ಧರಿಸುತ್ತಾರೆ. ಅವರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಾರೆ. ಮಾರುಕಟ್ಟೆಯನ್ನು ನಿಯಂತ್ರದಲ್ಲಿಟ್ಟುಕೊಳ್ಳುವುದು ಸೆಬಿ(SEBI)ಯ ಕೆಲಸವಾಗಿದೆ ಎಂದು ವಿತ್ತ ಸಚಿವರು ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಈಗಾಗಲೇ ಅದಾನಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಹೇಳಿಕೆಯನ್ನು ನೀಡಿದೆ. ಜತೆಗೆ, ಅದಾನಿಗೆ ಕಂಪನಿಗೆ ಸಾಲ ನೀಡಿದ ಹಾಗೂ ಹೂಡಿಕೆ ಮಾಡಿದ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಎಲ್‌ಐಸಿ ಕೂಡ ತಮ್ಮ ಹೇಳಿಕೆಯನ್ನು ದಾಖಲಿಸಿವೆ. ಹಾಗಾಗಿ, ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.