
ಕಾರಟಗಿ :*ತಾಲೂಕಿನ ಕುಂಟೋಜಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ಎಸ್ ಡಿ ಎಂ ಸಿ ಸದಸ್ಯರ ಮತ್ತು ಗ್ರಾಮ ಪಂಚಾಯತ್ ಸದಸ್ಯರ ಸಹಯೋಗದಲ್ಲಿ, ಹಾಗೂ ಜಿಲ್ಲಾ ಆಯುಷ್ ಇಲಾಖೆ ಕೊಪ್ಪಳ ಸಹಯೋಗದಲ್ಲಿ 2022-23 ನೇ ಸಾಲಿನ ಎಸ್ ಸಿ ಪಿ /ಟಿ ಎಸ್ ಪಿ ಯೋಜನೆಯಡಿಯಲ್ಲಿ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಶಾಲಾ ಮಕ್ಕಳು ಹೂ ಗುಚ್ಚ ನೀಡುವ ಮೂಲಕ ಮತ್ತು ಸ್ವಾಗತ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು* .

ಈ ವೇಳೆ *ಡಾ* : *ವೈ.ಜೆ. ಶಿರವಾರ ಜಿಲ್ಲಾ ಆಯುಷ್ ಅಧಿಕಾರಿಗಳು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು*: ಆರೋಗ್ಯವನ್ನು ಕೇವಲ ಆಸ್ಪತ್ರೆಗೆ ಸೀಮಿತಗೊಳಿಸದೇ ಸಮಾಜದ ಕಟ್ಟಕಡೆಯ ಸಾಮನ್ಯ ವ್ಯಕ್ತಿಯ ಮನೆ ಮತ್ತು ಮನಸ್ಸಿನವರೆಗೂ ತಲುಪಿಸಿ ಆರೋಗ್ಯವನ್ನು ಕಾಪಾಡಬೇಕಾಗಿದೆ. ರೋಗ ಬಂದ ಮೇಲೆ ಗುಣಪಡಿಸುದಕ್ಕಿಂತ ಬಾರದಂತೆ ತಡೆ ಹಿಡಿಯುವ ಬಗ್ಗೆ ಆರೋಗ್ಯದ ಜನಜಾಗೃತಿ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ನಂತರ *ಡಾ:ವೆಂಕಟೇಶ ದೇಶಪಾಂಡೆ ಅನುಷ್ಠಾನ ಅಧಿಕಾರಿಗಳು ಮಾತನಾಡಿ:* ಪ್ರತಿಯೊಬ್ಬ ಸಾರ್ವಜನಿಕರಲ್ಲಿ ಆಯುಷ್ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಿ, ಆಯುಷ್ ಚಿಕಿತ್ಸೆಯ ಉಪಯೋಗಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಯೋಜನಯೇ ಆಯುಷ್ ಸೇವಾಗ್ರಾಮ ಕಾರ್ಯಕ್ರಮ ಎಂದರು.
ನಂತರ *ಡಾ:ಗುರುರಾಜ ಉಮಚಗಿ ವೈದ್ಯಾಧಿಕಾರಿಗಳು ಮಾತನಾಡಿ* : ಗ್ರಾಮೀಣ ಭಾಗದ ಜನರಿಗೆ ಆಯುಷ್ ಪದ್ದತಿಯ ಬಗ್ಗೆ ಅರಿವು ಮೂಡಿಸಲಾಯಿತು. ಉಚಿತ ಆಯುಷ್ ಅರೋಗ್ಯ ತಪಾಸಣೆ, ಔಷಧಿ ವಿತರಣೆ, ಮನೆ ಮದ್ದು ಪ್ರಾತ್ಯಕ್ಷಿಕೆ, ಪ್ರಕೃತಿ ಚಿಕಿತ್ಸೆ ಮಾಹಿತಿ, ಔಷಧಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು.
*ಔಷದ ಸಸಿಗಳ ವಿತರಣೆ :* ಕುಂಟೋಜಿ ಗ್ರಾಮಸ್ಥರಿಗೆ ಜಿಲ್ಲಾ ಆಯುಷ್ ಇಲಾಖೆ ಕೊಪ್ಪಳರವರು ಕಾರ್ಯಕ್ರಮ ದಲ್ಲಿ ಔಷಧ ಸಸಿಗಳ ವಿತರಣೆ ಕೂಡ ಮಾಡಿದರು.
*ಔಷಧಿ ಕಿಟ್ ವಿತರಣೆ :* ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಔಷಧ ಕಿಟ್ಗಳನ್ನು ವಿತರಣೆ ಮಾಡಿದರು.

*ಈ ಸಂದರ್ಭದಲ್ಲಿ ವೈದ್ಯಧಿಕಾರಿಗಳಾದ- ಡಾ. ಪ್ರಹ್ಲಾದ್ ಐಲಿರಿ, ಡಾ.ರಾಜಶೇಖರ್ ನಾರನಾಳ, ಡಾ.ವೀಣಾ, ಡಾ. ದೀಪ್ತಿ, ಡಾ. ಬಾನುಪ್ರಕಾಶ್, ಡಾ. ಕವಿತಾ, ಡಾ. ವಿಜಯಶ್ರೀ ಮತ್ತು ಶುಶ್ರೂಷ ಅಧಿಕಾರಿಗಳಾದ -ಚಂದ್ರಕಾಂತ ಪಿ. ಆರ್. ಮತ್ತು ಔಷಧ ವಿತರಕರಾದ -ಖಾಜಾ ಹುಸೇನ್, ಶೈಲಶ್ರೀ,ಹಾಗೂ ಆಶಾ ಕಾರ್ಯಕರ್ತೆಯರಾದ ಕಲಾವತಿ, ಭಾರತಿ ಹಾಗೂ* *ಶಾಲಾ ಮುಖ್ಯೋಪಾಧ್ಯಾಯರಾದ ಅಂದಾನಪ್ಪ,ಶಾಲಾ ಎಸ್ ಡಿ ಎಂ ಸಿ -ಅಧ್ಯಕರಾದ ಎರಿಸ್ವಾಮಿ ಕುಂಟೋಜಿ, ಉಪಾಧ್ಯಕ್ಷರಾದ ಮಲ್ಲಪ್ಪ ಕೋತಿ,* *ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಹುಲಿಗೆಮ್ಮ ಷಣ್ಮುಖ, ಬಸಮ್ಮ ಮಲ್ಲಪ್ಪ, ಗಾದಿಲಿಂಗಪ್ಪ,ಊರಿನ ಮುಖಂಡರುಗಳಾದ ಹನುಮಂತ ಭೋವಿ, ಹುಸೇನಪ್ಪ ಹುಳ್ಳಾಗಡ್ಡಿ, ಸೋಮನಾಥ ಈಳಿಗೇರ, ಶಾಲಾ ಮಕ್ಕಳು, ಊರಿನ ಗ್ರಾಮಸ್ಥರು ಸೇರಿದಂತೆ ಅನೇಕರು ಭಾಗಿಯಾಗಿದ್ದರು.*