ಕೊಪ್ಪಳ ತಾಲೂಕಿನ ಹಳೆ ಗೊಂಡಬಾಳ ಗ್ರಾಮದ ನಕಲಿ ವೈದ್ಯನೊಬ್ಬ ಪತ್ರಿಕೆ ಸಂದರ್ಶನದಲ್ಲಿ ತಾನೇ ಚುಚ್ಚುಮದ್ದು ನೀಡಿದ್ದೇನೆ ಎಂಬುದು ಸಾರ್ವಜನಿಕ ವಲಯದಲ್ಲಿ ಗಾಢವಾದ ಚರ್ಚೆಗೆ ಈಡಾಗಿದೆ.
ತಾಲೂಕಿನ ಹಳೆ ಗೊಂಡಬಾಳ್ ಗ್ರಾಮದಲ್ಲಿ ಇತ್ತೀಚಿಗೆ ನಕಲಿ ವೈದ್ಯನ ನಿರ್ಲಕ್ಷದಿಂದ ಪಂಪಣ್ಣ ಜಾಗಿರದಾರ್ ಮೃತ ಪಟ್ಟ ವ್ಯಕ್ತಿ. ಸಾವಿಗೆ ಕಾರಣವಾದ ಕಾಶಪ್ಪ ಮುರುಡಿ ಎಂಬ ವೈದ್ಯನ ವಿರುದ್ಧ ಸಾರ್ವಜನಿಕ ವಲಯದಲ್ಲಿ ಕೇಳಿಬಂದ ಆರೋಪ. ಈ ವರದಿ ಹಿನ್ನೆಲೆ ಬೆನ್ನತ್ತಿದ ಪತ್ರಕರ್ತರು ಪ್ರತ್ಯಕ್ಷವಾಗಿ ನಕಲಿ ವೈದ್ಯನನ್ನು ಕಂಡು ಹೇಳಿಕೆ ಪಡೆದಾಗ ವೈದ್ಯನೆ ನೇರವಾಗಿ ಚುಚ್ಚುಮದ್ದು ನೀಡಿರುವದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು ಕೂಡಲೇ ಈ ವರದಿಯ ಆಧಾರದ ಮೇಲೆ ಜಿಲ್ಲಾ ವೈದ್ಯಾಧಿಕಾರಿಗಳು ಯಾವ ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾಡುನೋಡಬೇಕಿದೆ.
ಮೃತ ಬಾಲಕನ ಕುಟುಂಬ, ಸಂಬಂಧಿಕರ ದುಃಖ ಮುಗಿಲು ಮುಟ್ಟಿದೆ. ಇತ್ತೀಚೆಗೆ ಸಿಟಿ, ಹಳ್ಳಿಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿದ್ದು ಇಂತಹ ಪ್ರಕರಣಗಳನ್ನು ಜಿಲ್ಲಾ ವೈದ್ಯಾಧಿಕಾರಿಗಳು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರಾ..? ಎಂಬ ಪ್ರಶ್ನೆ ಸಹಜವಾಗಿ ಕಾಣುತ್ತದೆ ಕೂಡಲೇ ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಮುಂದಾಗಿ ಎಂಬುದು ಪ್ರಜ್ಞಾವಂತ ಜನರ ಆಗ್ರಹವಾಗಿದೆ.