ಬೆಂಗಳೂರು : ‘ಕೇಂದ್ರ ಬಜೆಟ್’ ಕನ್ನಡಿ ಒಳಗಿನ ಗಂಟು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಇದು ಅತ್ಯಂತ ನಿರಾಶದಾಯಕ ಬಜೆಟ್ , ಇದರಿಂದ ಏನು ಪ್ರಯೋಜನವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಇಂದು ಮಂಡನೆಯಾದ ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದರು. ಬಜೆಟ್ ಕನ್ನಡಿ ಒಳಗಿನ ಗಂಟು, ಕೃಷಿ, ನೀರಾವರಿ, ಸಮಾಜ ಕಲ್ಯಾಣ ಇಲಾಖೆಗೆ ಯಾವುದೇ ಒತ್ತು ನೀಡಿಲ್ಲ ಎಂದರು. . ಭದ್ರಾ ಮೇಲ್ದಂಡೆ ಯೋಜನಗೆ ಹಣ ನೀಡುತ್ತೇವೆ ಎಂದಿದ್ದಾರೆ. ಆದರೆ ಇನ್ನೂ ನೋಟಿಫಿಕೇಶನ್ ಸಹ ಬಂದಿಲ್ಲ ನೋಟಿಫಿಕೇಶನ್ ಆಗಿಲ್ಲ ಅಂದರೆ 1 ರೂ ಖರ್ಚು ಮಾಡಲು ಆಗಲ್ಲ ಎಂದಿದ್ದಾರೆ.. ಸಮಾಜ ಕಲ್ಯಾಣ ಇಲಾಖೆಗೆ ಯಾವುದೇ ಒತ್ತು ನೀಡಿಲ್ಲ, ಕರ್ನಾಟಕಕ್ಕೆ ಬಜೆಟ್ ನಲ್ಲಿ ಏನೂ ನೀಡಿಲ್ಲ ಎಂದಿದ್ದಾರೆ.

ಇನ್ನೂ, ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ರೂಪಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು .ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ರೂಪಿಸಲಾಗಿದೆ, ರೈತರನ್ನು ಪುನಃ ಕಡೆಗಣಿಸಲಾಗಿದೆ ಎಂದು ಅವರು ಹೇಳಿದರು. ರಾಗಿಯನ್ನು ಸಿರಿಧಾನ್ಯಗಳ ಪಟ್ಟಿಗೆ ಸೇರಿಸಲಾಗಿದ್ದರೂ ಅದಕ್ಕೆ ಕನಿಷ್ಟ ಬೆಂಬಲ ಬೆಲೆ ಘೋಷಿಸಿಲ್ಲ. ಬಜೆಟ್ ನಿಂದ ರೈತರಿಗೆ ಏನೂ ಸಿಕ್ಕಿಲ್ಲ ಎಂದರು.

error: Content is protected !!